ಉಜಿರೆ: ಚಾರ್ಮಾಡಿ ರೋಡ್ ನ ಎಂ.ಎಸ್. ಕಟ್ಟಡದಲ್ಲಿ ಶ್ರೀ ದುರ್ಗಾ ಎಂಟರ್ ಪ್ರೈಸಸ್ ಹೋಲ್ ಸೇಲ್ ಮತ್ತು ರಿಟೇಲ್ ಶಾಪ್ ನ. 5ರಂದು ಶುಭಾರಂಭಗೊಂಡಿದೆ. ಶ್ರೀ ದುರ್ಗಾ ಎಂಟರ್ ಪ್ರೈಸಸ್ ನ ಶುಭಾರಂಭವನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೇಟ್ನಾಯರ್ ಅವರು ಉದ್ಘಾಟನೆ ನೆರವೇರಿಸಿ ಶುಭಕೋರಿದರು. ಮುಖ್ಯ ಅತಿಥಿಗಳಾಗಿ ಗಣೇಶ್ ಪ್ರಸಾದ್ ಮೋಟಾರ್ ಲಿಂಕ್ಸ್ ನ ಮಾಲಕ ಪಾಂಡುರಂಗ ಭಂಡಾರ್ಕರ್, ಆರ್.ಎಮ್. ಆರ್ಥ್ ಮೂವರ್ಸ್ ನ ರವಿ ಚಕ್ಕಿತಾಯ ಶುಭ ಹಾರೈಸಿದರು.
ಪದ್ಮಾವತಿ ಶೆಟ್ಟಿ, ಧನರಾಜ್ ಶೆಟ್ಟಿ,ರಕ್ಷಾ ಧನರಾಜ್ ಶೆಟ್ಟಿ ದೊಂಪದಪಲ್ಕೆ, ದಯಾ ಶೆಟ್ಟಿ ನೇತ್ರಾವತಿ, ಗಣೇಶ್ ಶೆಟ್ಟಿ ಅಜೆಕುರಿ ಉಪಸ್ಥಿತರಿದ್ದರು. ಶ್ರೀ ದುರ್ಗಾ ಎಂಟರ್ ಪ್ರೈಸಸ್ ನ ಮಾಲಕರಾದ ಚರಣ್ ಶೆಟ್ಟಿ-ಅಶ್ವಿನಿ ಶೆಟ್ಟಿ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿ, ಸಂಸ್ಥೆಯಲ್ಲಿ ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವಿಸ್, ಪ್ರಿಂಟರ್ ರಿಪೇರಿ, ಟೋನರ್ ರಿಫಿಲ್ಲಿಂಗ್, ಡ್ರೈವಿಂಗ್ ಲೈಸೆನ್ಸ್, ಸಿ ಸಿ ಕ್ಯಾಮೆರಾ ಸೇಲ್ಸ್ ಮತ್ತು ಸರ್ವಿಸ್, ಲೇಸರ್ ಇಂಕ್ ಜೆಟ್ ಪ್ರಿಂಟರ್ ಸರ್ವಿಸ್, ಸೌಲಭ್ಯಗಳು ಲಭ್ಯವಿದೆ ಎಂದು ಹೇಳಿದರು. ಟೀಚರ್ಸ್ ಕೋಆಪರೇಟಿವ್ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ರವೀಂದ್ರ ಶೆಟ್ಟಿ ಬಳಂಜ ನಿರೂಪಿಸಿದರು.

