Site icon Suddi Belthangady

ಬೆಳ್ತಂಗಡಿ: ಪೊಲೀಸ್ ಉಪವಿಭಾಗ ಘೋಷಣೆ-ಡಿವೈಎಸ್ಪಿಯಾಗಿ ಸಿ.ಕೆ. ರೋಹಿಣಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರ ಹೊಸದಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಬೆಳ್ತಂಗಡಿ ಉಪವಿಭಾಗ ಘೋಷಿಸಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಪ್ರಥಮ ಡಿವೈಎಸ್‌ಪಿಯಾಗಿ ಸಿ.ಕೆ. ರೋಹಿಣಿ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಪುತ್ತೂರು ಪೊಲೀಸ್ ಉಪವಿಭಾಗ ವ್ಯಾಪ್ತಿಗೆ ಬೆಳ್ತಂಗಡಿ ತಾಲೂಕು ಬರುತ್ತಿತ್ತು. ಇದೀಗ ಬೆಳ್ತಂಗಡಿ ಪೊಲೀಸ್ ಉಪವಿಭಾಗವನ್ನು ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ತರಲಾಗಿದ್ದು ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಧರ್ಮಸ್ಥಳ, ಪುಂಜಾಲಕಟ್ಟೆ, ವೇಣೂರು ಮತ್ತು ಬೆಳ್ತಂಗಡಿ ಸಂಚಾರ ಠಾಣೆಗಳು ಇದರ ವ್ಯಾಪ್ತಿಗೆ ಬರಲಿದೆ. ೨೦೨೨ರ ಬ್ಯಾಚ್‌ನಲ್ಲಿ ನೇರ ನೇಮಕವಾಗಿರುವ ಸಿ.ಕೆ. ರೋಹಿಣಿ ಅವರನ್ನು ಇದೀಗ ಹೊಸದಾಗಿ ಸೃಜನೆಯಾಗಿರುವ ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿಯಾಗಿ ಅವರನ್ನು ನಿಯೋಜಿಸಲಾಗಿದೆ.
ಹೊಸ ಡಿವೈಎಸ್‌ಪಿಯವರು ಸದ್ಯಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

Exit mobile version