Site icon Suddi Belthangady

ಎಸ್.ಎಸ್.ಎಲ್.ಸಿ-ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಳ್ತಂಗಡಿ: ೨೦೨೫-೨೬ನೇ ಸಾಲಿನ SSLC ಮತ್ತು ದ್ವೀತಿಯ ಪಿಯುಸಿ ಪರೀಕ್ಷೆ ೧ ಮತ್ತು ೨ ಅಂತಿಮ ವೇಳಾಪಟ್ಟಿಯನ್ನ ಶಿಕ್ಷಣ ಇಲಾಖೆ ಪ್ರಕಟ ಮಾಡಿದೆ. ಫೆಬ್ರವರಿಯಿಂದಲೇ ಈ ವರ್ಷದ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಮೇ ಗೆ ಎರಡು ಪರೀಕ್ಷೆಗಳು ಮುಗಿಯಲಿವೆ. SSLC ಪರೀಕ್ಷೆ ೧ ಮಾರ್ಚ್ ೧೮ ರಿಂದ ಏಪ್ರಿಲ್ ೨ ವರೆಗೆ ನಡೆದರೆ, SSLC ಪರೀಕ್ಷೆ ೨ ಮೇ ೧೮ ರಿಂದ ಮೇ ೨೫ವರೆಗೆ ನಡೆಯಲಿದೆ. ದ್ವೀತಿಯ PUC ಪರೀಕ್ಷೆ ೧ ಫೆಬ್ರವರಿ ೨೮ ರಿಂದ ಮಾರ್ಚ್ ೧೭ವರೆಗೆ ನಡೆದರೆ, ಪರೀಕ್ಷೆ ೨ ಏಪ್ರಿಲ್ ೨೪ ರಿಂದ ಮೇ ೯ವರೆಗೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿ ಹೀಗಿದೆ.

SSLC ಪರೀಕ್ಷೆ ೧ ವೇಳಾಪಟ್ಟಿ: ಮಾ.೧೮ – ಪ್ರಥಮ ಭಾಷೆ, ಮಾ.೨೩- ವಿಜ್ಞಾನ, ಮಾ.೨೫ – ದ್ವೀತಿಯ ಭಾಷೆ ಮಾ.೨೮ – ಗಣಿತ, ಮಾ.೩೦ – ತೃತೀಯ ಭಾಷೆ, ಏ.೨ – ಸಮಾಜ ವಿಜ್ಞಾನ
SSLC ಪರೀಕ್ಷೆ ೨ ವೇಳಾಪಟ್ಟಿ ಮೇ ೧೮- ಪ್ರಥಮ ಭಾಷೆ, ಮೇ ೧೯- ವಿಜ್ಞಾನ, ಮೇ ೨೦- ದ್ವೀತಿಯ ಭಾಷೆ
ಮೇ ೨೧- ಗಣಿತ, ಮೇ ೨೨ – ತೃತೀಯ ಭಾಷೆ, ಮೇ ೨೩ – ಸಮಾಜ ವಿಜ್ಞಾನ
ದ್ವೀತಿಯ ಪಿಯುಸಿ ಪರೀಕ್ಷೆ ೧ ವೇಳಾಪಟ್ಟಿ
ಫೆ.೨೮ – ಕನ್ನಡ, ಅರೇಬಿಕ್, ಮಾ.೨- ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಮಾ.೩ – ಇಂಗ್ಲಿಷ್, ಮಾ.೪ – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾ.೫ – ಇತಿಹಾಸ, ಮಾ.೬ – ಭೌತಶಾಸ್ತ್ರ, ಮಾ.೭ – ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ.
ಮಾ.೯ – ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ, ಮಾ.೧೦ – ಅರ್ಥಶಾಸ್ತ್ರ
ಮಾ.೧೧ – ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ, ಮಾ.೧೨ – ಹಿಂದಿ
ಮಾ.೧೩ – ರಾಜ್ಯಶಾಸ್ತ್ರ, ಮಾ.೧೪ – ಲೆಕ್ಕಶಾಸ್ತ್ರ, ಗಣಿತ, ಮಾ.೧೬ – ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
ಮಾ.೧೭ – ಹಿಂದೂಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ.
ದ್ವೀತಿಯ ಪಿಯುಸಿ ಪರೀಕ್ಷೆ ೨ ವೇಳಾಪಟ್ಟಿ:
ಏ.೨೫ – ಕನ್ನಡ, ಅರೇಬಿಕ್, ಏ.೨೭ – ಐಚ್ಫಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ ಜೀವಶಾಸ್ತ್ರ, ಏ.೨೮ – ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ, ಏ.೨೯ – ಗಣಿತ, ಗೃಹ ವಿಜ್ಞಾನ, ಮೂಲ ಗಣಿತ
ಏ.೩೦ – ಅರ್ಥಶಾಸ್ತ್ರ, ಮೇ ೨ – ಇತಿಹಾಸ, ರಸಾಯನಶಾಸ್ತ್ರ, ಮೇ ೪ – ಇಂಗ್ಲಿಷ್, ಮೇ ೫ – ಹಿಂದಿ, ಮೇ ೬ – ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ.
ಮೇ ೭ – ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ ೮ – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ.
ಮೇ ೯ – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮೇ ೯ – ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ರಿಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ.

Exit mobile version