ಬೆಳ್ತಂಗಡಿ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಖುಷಿ ಆಂಬುಲೆನ್ಸ್ ಡ್ರೈವರ್ ಭುವನೇಶ್ ಹೆಗ್ಡೆ ಅವರು ಕ್ಯಾನ್ಸರ್ ಪೀಡಿತರಿಗೆ ವಿಗ್ ಮಾಡಿಸಲು 12 ಇಂಚು ಉದ್ದದ ಕೇಶ ದಾನ ಮಾಡಿದ್ದಾರೆ.
ಬೆಳ್ತಂಗಡಿ ನಗರದ ರೆಂಕೆದಗುತ್ತು ನಿವಾಸಿ ದಿ. ಬಾಬು ಮತ್ತು ಜಯಂತಿ ಅವರ ಪುತ್ರ ಭುವನೇಶ್ ಹೆಗ್ಡೆ (24ವ.) ಅವರು ತನ್ನ ಕೂದಲನ್ನು 2 ವರ್ಷ 6ತಿಂಗಳು ಕತ್ತರಿಸದೆ ಜೋಪಾನ ಮಾಡಿ ಇದೀಗ 12 ಇಂಚು ಉದ್ದ ಇರುವ ಕೂದಲನ್ನು ದಾನ ಮಾಡಿದ್ದಾರೆ.
ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಶೃಂಗಾರ್ ಮಾಸ್ಟರ್ ಕಟ್ಸ್ ನಲ್ಲಿ ನ.6ರಂದು ಕೇಶ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

