ಉಜಿರೆ: ಮಾನವನ ಸೃಷ್ಟಿ ಅದ್ಭುತ, ಆತನ ಬುದ್ಧಿ ಮಹತ್ವವಾದದ್ದು, ಯಂತ್ರದ ಬಳಕೆ ಮೂಲಕ ಜಗತ್ತಿಗೆ ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಆವನಲ್ಲಿದೆ, ಜೊತೆಗೆ ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆ ಮೂಲಕ ಶೈಕ್ಷಣಿಕ ಕ್ಷೇತ್ರವಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ಣ ಸಾಧನೆ ಸಾಧ್ಯವಾಗಿಸಿದ್ದಾನೆ. ಕಾಲೇಜಲ್ಲಿ ಚಾಲನೆಗೊಂಡ ಡಿಜಿಟಲ್ ಗ್ರಂಥಾಲಯದ ಸರಿಯಾದ ಬಳಕೆ ನಿಮ್ಮಿಂದಾಗಲಿಯೆಂದು, ಅತಿಥಿಯಾಗಿ ಆಗಮಿಸಿ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ ನೀಡಿದ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಹೇಳಿದರು.
ಎಸ್. ಡಿ. ಎಂ. ಪದವಿ ಕಾಲೇಜಿನ ಗಣಕಶಾಸ್ತ್ರ ಮುಖ್ಯಸ್ಥರು ಆಗಿರುವ ಶ್ರೀಯುತ ಶೈಲೇಶ್ ಕುಮಾರ್ ಜೊತೆಗಿದ್ದು ಸಹಕರಿಸಿದರು.
ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಅಧ್ಯಕ್ಷತೆ ವಹಿಸಿ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಎಲ್ಲಾ ರೀತಿಯಲ್ಲೂ ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳು ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳೊದು ಬಹಳ ಮುಖ್ಯ ಎಂದರು. ಅತಿಥಿಗಳ ಸಾಧನೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ಪ್ರಮೋದ್ ಕುಮಾರ್ ಹಾಗೂ ರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರ ಪ್ರಶಸ್ತಿ ಪಡೆದ ಶೈಲೇಶ್ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಂಥಪಾಲಕ ಗಿರಿಧರ್ ಸಹಕರಿಸಿದರು. ಕಾಲೇಜಿನ ವಿದ್ಯಾರ್ಥಿ ನಿಖಿಲ್ ನಿರೂಪಿಸಿದರು. ಗಣಕ ಶಾಸ್ತ್ರದ ಉಪನ್ಯಾಸಕ ಪವಿತ್ರ ಕುಮಾರ್ ವಂದಿಸಿದರು.

