ಬೆಳ್ತಂಗಡಿ: ಹಳೆ ದ್ವೇಷದಿಂದ ಬಲಕಣ್ಣಿಗೆ ಮತ್ತು ಎಡಕಣ್ಣಿಗೆ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಮಿನಿ ವಿಧಾನಸೌಧದ ರಸ್ತೆಯ ಬಳಿ ನ.3ರಂದು ಸಂಜೆ 4:30ರ ಸುಮಾರಿಗೆ ಧರ್ಮಸ್ಥಳ ಗ್ರಾಮದ ಇಬ್ರಾಹಿಂ(32) ಎಂಬವರಿಗೆ ಉಜಿರೆ ಟಿ.ಬಿ ಕ್ರಾಸ್ ನಿವಾಸಿ ಅಫ್ರೀದ್ ಯಾನೆ ಅಪ್ಪಿ ಎಂಬಾತ ಆಟೋ ರಿಕ್ಷಾದಲ್ಲಿ ಬಂದು ಯಾವುದೋ ಅಯುಧದಿಂದ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾಗ ಸಾರ್ವಜನಿಕರು ಸೇರುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾದ ಇಬ್ರಾಹಿಂ ಬೆಳ್ತಂಗಡಿ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನ.3ರಂದು ಅಫ್ರೀದ್ ಯಾನೆ ಅಪ್ಪಿ ಮತ್ತು ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಹಳೆ ದ್ವೇಷದಿಂದ ಹಲ್ಲೆ-ಕೇಸ್ ದಾಖಲು

