Site icon Suddi Belthangady

ಬಾರ್ಯ: ಪ್ರಾ.ಕೃ.ಪ.ಸ. ಸಂಘದ ಚುನಾವಣೆ: ಎಲ್ಲಾ 12 ಸ್ಥಾನಗಳಲ್ಲಿಯೂ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಗೆಲುವು

ಬೆಳ್ತಂಗಡಿ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ 12ಕ್ಕೆ 12 ಸ್ಥಾನಗಳಲ್ಲಿಯೂ ಜಯಭೇರಿ ಬಾರಿಸಿದೆ.

ನ.5ರಂದು ಬಾರ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಚುನಾವಣೆ ನಡೆದು ಸಂಜೆ ಮತ ಎಣಿಕೆ ನಡೆಯಿತು. ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಚುನಾವಣಾಧಿಕಾರಿಯಾಗಿದ್ದರು.

ಸಹಕಾರ ಭಾರತಿಗೆ ಜಯ-
ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಸನ್ನ ಗೌಡ 792, ಪ್ರವೀಣ್ ರೈ 695, ಪ್ರಶಾಂತ್ ಪೈ 682, ಚಂದ್ರಶೇಖರ ಕುಂಡಡ್ಕ 636, ಮೋಹನ್ ಗೌಡ 633, ಹರ್ಷಿತ್ ಕಲಾಯ 659, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೇಸಪ್ಪ ಕೋಟ್ಯಾನ್ 728, ಹಿಂದುಳಿದ ಬಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜೇಶ್ ರೈ ಹೆನ್ನಡ್ಕ 788, ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸವಿತಾ ವೆಂಕಟೇಶ್ 691, ಹೇಮಾವತಿ 640, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುರೇಶ್ ಸುಣ್ಣಜೆ 750, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿವರಾಮ ನಾಯ್ಕ ಕೆಳಗಿನಂಗಡಿ 786 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲು-
ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಬಾಲಕೃಷ್ಣ ಶೆಟ್ಟಿ 541, ಕಲ್ಲಕಟ್ಟ ಉಸ್ಮಾನ್ 331, ಶಿವಪ್ರಸಾದ್ ಗೌಡ ಕರ್ಪಾಡಿ 428, ಗುರುಪ್ರಸಾದ್ ಪೊಯ್ಯೇಲ್ 415, ಅಶ್ರಫ್ ಪಲ್ಕಿ 331, ಚಂದ್ರಶೇಖರ ಪೊರ್ಕಲ 376, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಶ್ರೀಧರ್ 413 , ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಸ್ಪರ್ಧಿಸಿದದ ಕಾಂತಪ್ಪ ಗೌಡ 358, ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉಷಾ ಶರತ್ 592, ಸರೋಜಿನಿ 357, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯಂತಿ ಪಂಚಲಾಜೆ 363, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಪುಷ್ಪಾ 339 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.

Exit mobile version