ಬೆಳ್ತಂಗಡಿ: ದ್ವಾರಕಾ ಡ್ರೈವಿಂಗ್ ಸ್ಕೂಲ್ ಎದುರು ಕಾಮತ್ ಸ್ಟೋರ್ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸುಧನ ವಿವಿ ದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ 2025-30ನೇ ಸಾಲಿಗೆ ನ. 4ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ವಿ.ಭಟ್ ಉಪಾಧ್ಯಕ್ಷರಾಗಿ ಎಂ.ಪರಮೇಶ್ವರ ಭಟ್, ನಿರ್ದೇಶಕರಾದ ಜಿ.ಪಿ. ಶ್ಯಾಮ್ ಭಟ್, ವೆಂಕಪ್ಪಯ್ಯ, ಕೆ.ಸುಬ್ರಹ್ಮಣ್ಯ ಭಟ್, ಕೃಷ್ಣ ಭಟ್ ಕೆ., ಉದಯ ಶಂಕರ್, ಸುಮಂಗಲ ಕೆ., ಶ್ರೀದೇವಿ ಅವರು ಆಯ್ಕೆಯಾಗಿದ್ದಾರೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಕುಮಾರ್ ಬಿ. ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಬಾಲ್ಯ ಶಂಕರ್ ಭಟ್ ಸ್ವಾಗತಿಸಿ, ಉಪಾಧ್ಯಕ್ಷ ಎಂ.ಪರಮೇಶ್ವರ ಭಟ್ ವಂದಿಸಿದರು.

