Site icon Suddi Belthangady

ಕಾಡಾನೆ ಓಡಾಟ ಮಿತ್ತಬಾಗಿಲು ಗ್ರಾ.ಪಂ.ನಿಂದ ಎಚ್ಚರಿಕೆ

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆ, ಗಣೇಶನಗರ, ಬೆಡಿಗುತ್ತು, ದಿಡುಪೆ ಪರಿಸರದಲ್ಲಿ 5 ಕಾಡಾನೆಗಳು ಓಡಾಡುತ್ತಿದ್ದು ಈ ಪ್ರದೇಶದ ಜನರು ಯಾವುದೇ ಕಾರಣಕ್ಕೂ ಹಗಲಲ್ಲಿ ಒಂಟಿಯಾಗಿ ಕಾಡಿಗೆ ಹೋಗುವುದು ಮತ್ತು ರಾತ್ರಿ ವೇಳೆ ತೋಟಗಳಿಗೆ ಹೋಗಬಾರದು ಎಂಬುದಾಗಿ ಮಿತ್ತಬಾಗಿಲು ಗ್ರಾ.ಪಂ. ಪಿಡಿಒ ಪ್ರಕಟಣೆ ನೀಡಿದ್ದಾರೆ. ಆನೆಗಳು ಕಂಡು ಬಂದಲ್ಲಿ‌ ತಕ್ಷಣ ಅರಣ್ಯ ಇಲಾಖೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Exit mobile version