ಗುರುವಾಯನಕೆರೆ: ಶಕ್ತಿನಗರದ ಕಡಂಬು ನಿವಾಸಿ ಸಾಯಿ ರಾಮ್ ಫ್ರೆಂಡ್ಸ್ ತಂಡದ ಸದಸ್ಯ ಒಂದು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಸುಕೇಶ್ ಎಂಬವರು ಕಾರಣಾಂತರಗಳಿಂದ ತನ್ನ ಕೆಲಸವನ್ನು ಕಳೆದುಕೊಂಡಿದ್ದರು.
ಸ್ವ ಉದ್ಯೋಗಕ್ಕಾಗಿ ಆಟೋ ರಿಕ್ಷಾ ಖರೀದಿ ಮಾಡಿ ಕೆಲಸ ಮಾಡಲು ನಿರ್ಧರಿಸಿದರು. ಸಾಯಿ ರಾಮ್ ಫ್ರೆಂಡ್ಸ್ ತಂಡದ ಶಶಿರಾಜ್ ಶೆಟ್ಟಿ ಅವರು ಇಟ್ಟ ಬೇಡಿಕೆಗೆ ಸ್ಪಂದಿಸಿದ ಖ್ಯಾತ ಉದ್ಯಮಿ ಬರೋಡ ಶಶಿಧರ್ ಶೆಟ್ಟಿಯವರು ಸುಕೇಶ್ ಅವರಿಗೆ 50,000 ರೂಪಾಯಿಗಳ ಧನ ಸಹಾಯ ಮಾಡಿ ಸಂಕಷ್ಟದಲ್ಲಿದ್ದ ಸುಕೇಶ್ ಬಾಳಿಗೆ ಬೆಳಕಾಗಿದ್ದಾರೆ.

