
ಬೆಳ್ತಂಗಡಿ: ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ನ.16ರಂದು ಮಕ್ಜಳ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಬೆಳಗ್ಗೆ ಸಮಯ 9.30ರಿಂದ ಮಧ್ಯಾಹ್ನ ಸಮಯ 1ರವರೆಗೆ ನಡೆಯಲಿರುವ ಶಿಬಿರದಲ್ಲಿ ಅಸ್ತಮಾ, ಉಬ್ಬಸ, ಅತಿಸಾರ(ಅತಿಭೇದಿ), ಮಲಬದ್ಧತೆ, ಜ್ವರ, ಅಲರ್ಜಿ, ರ್ಯಾಶಸ್(ರದ್ದುಗಳು), ಚರ್ಮದ ಸೋಂಕು, ಕೆಮ್ಮು, ಕಫ, ಹೊಟ್ಟೆನೋವು, ಹಲ್ಲುನೋವು, ಕಟ್ಟಿಕೊಳ್ಳುವ ಮೂಗು, ವಾಕರಿಕೆ ಮತ್ತು ವಾಂತಿ, ಪೌಷ್ಟಿಕಾಂಶದ ಕೊರತೆ, ಮೂರ್ಛೆರೋಗ, ಮಕ್ಕಳ ಬೆಳವಣಿಗೆಯ ಮೌಲ್ಯಮಾಪನ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮಕ್ಕಳ ರೋಗ ತಜ್ಞರಾದ ಡಾ|ಪ್ರಥಿತ್, ಡಾ| ಅರ್ಚನಾ ಕೆ.ಎಂ, ಡಾ| ನಿಖಿತಾ ಮಿರ್ಲೆ ಈ ಶಿಬಿರದಲ್ಲಿ ಪಾಲ್ಗೊಂಡು ಮಕ್ಕಳ ತಪಾಸಣೆ ನಡೆಸಲಿದ್ದಾರೆ.
ಈ ಶಿಬಿರದಿಂದ ಉಚಿತ ವೈದ್ಯರ ಸಮಾಲೋಚನೆ ಪಡೆದುಕೊಳ್ಳಬಹುದು. ಒಳರೋಗಿ ವಿಭಾಗದಲ್ಲಿ ಶೇ.10, ಔಷಧದಲ್ಲಿ ಶೇ.10, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ ಶೇ.20ರಷ್ಟು ರಿಯಾಯಿತಿ ಇರಲಿದೆ. ಸಂಪೂರ್ಣ ಸುರಕ್ಷಾ ವಿಮೆ ಹೊಂದಿರುವವರು ವಿಮಾ ಕಾರ್ಡಿನ ಪ್ರತಿ ಹಾಗೂ ಆಧಾರ್ ಕಾರ್ಡ್ ಪ್ರತಿಗಳನ್ನು ತರತಕ್ಕದ್ದು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. ಹೆಸರು ನೋಂದಾಯಿಸಲು 77603-97878, 80733-49216 ಸಂಖ್ಯೆಯನ್ನು ಸಂಪರ್ಕಿಸಬಹುದು.

