ಬೆಳ್ತಂಗಡಿ: ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಇದರ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 101ನೇ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪ್ರಥಮ ನೀಲಪದ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಸುಳ್ಯ ತಾಲೂಕಿನ ಹರಿಹರ ಪಳ್ಳತಡ್ಕ ಕೊಂಬೋಟು ಮನೆತನದ ಟ್ರಸ್ಟ್ ವತಿಯಿಂದ ನೀಡಲಾಗುವ ಪ್ರಥಮ ನೀಲಪದ್ಮ ಪ್ರಶಸ್ತಿಯನ್ನು ನಿಧಿ ಸಹಿತವಾಗಿ ಶ್ರೀ ಕಾಳಿಕಾಂಬಾದ ಹಿರಿಯ ಅರ್ಥಧಾರಿ ಗೋಪಾಲ ಶೆಟ್ಟಿ ಕಳೆಂಜ ಅವರಿಗೆ ಪ್ರದಾನ ಮಾಡಲಾಯಿತು.
ಟ್ರಸ್ಟಿನ ಸಂಚಾಲಕ ಶ್ರೀಧರ ಎಸ್ಪಿ ಕೃಷ್ಣಾಪುರ ಅಭಿನಂದನೆಯನ್ನು ನುಡಿಗಳೊಂದಿಗೆ ಪ್ರಶಸ್ತಿ ಪತ್ರ ವಾಚನ ಮಾಡಿದರು. ಮುಖ್ಯ ಅತಿಥಿಗಳಾಗಿ ಕಲಾಪೋಷಕ ಉಮೇಶ ಶೆಣೈ ರಾಮನಗರ, ಕಾಳಿಕಾಂಬಾ ಟ್ರಸ್ಟಿನ ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ, ಸಹ ಕಾರ್ಯದರ್ಶಿ ಪದ್ಮನಾಭ ಕುಲಾಲ್, ಹಿರಿಯ ಸದಸ್ಯ ಬಿ.ಸುಬ್ರಮಣ್ಯ ರಾವ್, ಪೆರಿಯಡ್ಕ ಸಾಂಸ್ಕೃತಿಕ ಕಲಾ ವೇದಿಕೆಯ ಸಂಚಾಲಕ ಮಹಾಲಿಂಗೇಶ್ವರ ಭಟ್ ಕೊಂಬೋಟು ಟ್ರಸ್ಟಿನ ಪವಿತ್ರಾಕ್ಷಿ ಎಸ್., ದುಶ್ಯಂತ ಎಸ್., ನಿಶ್ಚಿತ್ ಎಸ್. ಅವರು ಗೋಪಾಲ ಶೆಟ್ಟಿ ಅವರನ್ನು ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿದ ಗೋಪಾಲ ಶೆಟ್ಟಿ ಅವರು ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದಲ್ಲಿ ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸಿದ ಎಲ್ಲರಿಗೂ ಈ ಪ್ರಶಸ್ತಿಯನ್ನು ಅರ್ಪಿಸುವುದಾಗಿ ತಿಳಿಸಿದರು.
ನುಡಿನಮನ: ಇತ್ತೀಚೆಗೆ ನಿಧನರಾದ ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ದಿನೇಶ ಅಮ್ಮಣ್ಣಾಯ ಮತ್ತು ಅರ್ಥಧಾರಿ, ವೇಷಧಾರಿ ಶಂಭುಶರ್ಮ ವಿಟ್ಲ ಅವರ ಬಗ್ಗೆ ಪುತ್ತೂರು ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಬಲ್ಯ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಅಧ್ಯಕ್ಷ ಜಯರಾಮ ಗೌಡ ನಾಲ್ಗುತ್ತು, ಇಚ್ಚ್ಯೂರು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅರ್ಚಕ ಸುರೇಶ್ ಪುತ್ತೂರಾಯ, ಪುಷ್ಪಲತಾ ಎಂ., ಜಯಲಕ್ಷ್ಮಿ ಎಸ್. ರಾವ್, ಆಶಾ ರಾವ್ ಬಿ. ಉಪಸ್ಥಿತರಿದ್ದರು.
ಮಹಾಭಾರತ ಸರಣಿಯ 101ನೇ ತಾಳಮದ್ದಳೆ ದ್ರೋಣ ನಿರ್ಗಮನ:ಈ ಪ್ರಸಂಗದಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್ ಬಿ., ನಿತೀಶ್ ಮನೋಳಿತ್ತಾಯ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ದಿವಾಕರ ಆಚಾರ್ಯ ಹಳೆನೇರೆಂಕಿ ಅರ್ಥಧಾರಿಗಳಾಗಿ ಗುಡ್ಡಪ್ಪ ಬಲ್ಯ, ದಿವಾಕರ ಆಚಾರ್ಯ ಗೇರುಕಟ್ಟೆ, ಗೀತಾ ಕುದ್ದಣ್ಣಾಯ, ಸತೀಶ ಶಿರ್ಲಾಲು, ದಿವಾಕರ ಆಚಾರ್ಯ ಹಳೇನೇರೆಂಕಿ, ಜಯರಾಮ ಬಲ್ಯ, ಶ್ರೀಧರ ಎಸ್. ಪಿ., ಶ್ರುತಿ ವಿಸ್ಮಿತ್ ಬಲ್ನಾಡ್, ಬಾಲಕೃಷ್ಣ ಕೇಪುಳು ಭಾಗವಹಿಸಿದ್ದರು. ಟ್ರಸ್ಟಿನ ಸದಸ್ಯ ಸಂಜೀವ ಪಾರೆಂಕಿ ಸ್ವಾಗತಿಸಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಕೆ. ವಂದಿಸಿದರು.

