Site icon Suddi Belthangady

ಗುಡ್ ಫ್ಯೂಚರ್ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ- 2025

ಬೆಳ್ತಂಗಡಿ: 2025ರ ಪ್ರತಿಭಾ ಪುರಸ್ಕಾರ ಸಮಾರಂಭವು ಶಾಲಾ ಸಂಚಾಲಕ ನಸೀರ್ ಅಹಮದ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಕುಮುದಾಕ್ಷಿ ಅವರು ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಪ್ರಭಾಕರ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತಿನೊಂದಿಗೆ 2025ರ ಎಸ್.ಎಸ್.ಎಲ್.ಸಿ ಪರೀಕ್ಷೆಯ 100% ಫಲಿತಾಂಶಕ್ಕಾಗಿ ಎಲ್ಲಾ ಮಕ್ಕಳನ್ನು, ಶಿಕ್ಷಕಿಯರನ್ನು ಅಭಿನಂದಿಸಿದರು.
ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ದಿತೀಕ್ಷ್ ದೀಪೇಶ್, ಶರ್ವಿನ್, ಫೈಹಾ ಮತ್ತು ಆಶೀರ್ ಇವರನ್ನು ವಿಶೇಷವಾಗಿ ಗೌರವಿಸುವುದರ ಜೊತೆಗೆ ಉತ್ತೀರ್ಣರಾದ ಎಲ್ಲರನ್ನೂ ಗೌರವಿಸಲಾಯಿತು.

ವಿಶೇಷ ಆಹ್ವಾನಿತರಾದ ಶ್ರೀ ಶಾಜಿ ಕೆ ಕುರಿಯನ್ ರವರು ಎಲ್ಲರನ್ನೂ ಅಭಿನಂದಿಸಿ ಮಕ್ಕಳಿಗೆ ಶುಭವನ್ನು ಕೋರಿದರು. ಸಂಚಾಲಕರು ಮಕ್ಕಳನ್ನು ಅಭಿನಂದಿಸುವುದರ ಜೊತೆಗೆ ಇದಕ್ಕೆ ಕಾರಣೀಭೂತರಾದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕಿಯರ ಪರಿಶ್ರಮಕ್ಕೆ ಕೃತಜ್ಞತೆಯನ್ನು ಅರ್ಪಿಸಿದರು. ವೇದಿಕೆಯಲ್ಲಿ ಶ್ರೀ ಶುಕುರ್ ಸಾಹೇಬ್, ಶ್ರೀಧನಕೀರ್ತಿ ಜೈನ್, ಶ್ರೀ ವೀರೇಂದ್ರ ಕುಮಾರ್ ಜೈನ್, ಶ್ರೀಮತಿ ಹರಿಣಾಕ್ಷಿ ಯವರು ಉಪಸ್ಥಿತರಿದ್ದರು. ಶ್ರೀಮತಿ ಸೌಜನ್ಯ ಮಕ್ಕಳನ್ನು ಪರಿಚಯಿಸಿದರು. ಶಿಕ್ಷಕಿಯರಾದ ರೂಪ ನಿರೂಪಿಸಿ, ಶೃತಿ ವಂದಿಸಿದರು.

Exit mobile version