Site icon Suddi Belthangady

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆಯು ಅ. 28ರಂದು ಅವಿರೋಧವಾಗಿ ನಡೆಯಿತು. ಸೊಸೈಟಿಯ 11ಮಂದಿ ಸಮಾನ ಮನಸ್ಕರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಮುಂದಿನ 2025-30ರ ಅವಧಿಗೆ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಯು ನ.4ರಂದು ಬೆಳ್ತಂಗಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ ಚುನಾವಣಾ ಅಧಿಕಾರಿಯವರ ನೇತೃತ್ವದಲ್ಲಿ ನಡೆಯಿತು.

ಸೊಸೈಟಿಯು ಕಳೆದ 10 ವರ್ಷದಿಂದ ಯಶಸ್ವಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದು, ಈ ಎಲ್ಲಾ ಸಾಧನೆಯಲ್ಲಿ ಅಧ್ಯಕ್ಷರಾಗಿ ಸತತ ಎರಡು ಅವಧಿಯಲ್ಲಿ ನಿಸ್ವಾರ್ಥ ಸೇವೆಗೈದ ಲೆನ್ಸಿ ಪಿಂಟೊ ಅವರು ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಫ್ರಾನ್ಸಿಸ್ ವಿ.ವಿ., ನಿರ್ದೇಶಕರಾಗಿ ವಿವೇಕ್ ವಿನ್ಸೆಂಟ್ ಪಾಸ್, ಜೋಯೆಲ್ ಗೋಡ್‌ಫ್ರಿ ಮೆಂಡೋನ್ಸಾ, ಸಿರಿಲ್ ಸಿಕ್ವೇರಾ, ರೊನಾಲ್ಡ್ ಸಿಕ್ವೇರಾ, ಗ್ರೆಗೋರಿ ಸೇರಾ, ಲಿಯೋ ರೊಡ್ರಿಗಸ್, ಸೆಲೆಸ್ತಿನ್ ಡಿ ಸೋಜಾ, ಗ್ರೇಸಿ ರೀಟಾ ರೆಬೆಲ್ಲೊ, ಮೋಲಿ ಫೆರ್ನಾಂಡಿಸ್ ಆಯ್ಕೆಯಾಗಿದ್ದು ಮುಂದಿನ 5ವರ್ಷಗಳಿಗೆ ಈ ಮಂಡಳಿಯು ಸೊಸೈಟಿಯ ಜವಾಬ್ದಾರಿಯನ್ನು ಹೊತ್ತುಕೊಂಡು ಕಾರ್ಯನಿರ್ವಹಿಸಲಿದೆ.

ಈ ಪ್ರಕ್ರಿಯೆಯನ್ನು ದ.ಕ.ಜಿಲ್ಲಾ ಸಹಕಾರಿ ಸಂಘಗಳ ಉಪ ನಿರ್ದೇಶಕ ಎಚ್.ಎನ್. ರಮೇಶ್‌ ಅವರ ನಿರ್ದೇಶನದಂತೆ ಬೆಳ್ತಂಗಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ ಅವರು ಚುನಾವಣಾ ಅಧಿಕಾರಿಯಾಗಿ ಎಲ್ಲಾ ಪ್ರಕ್ರಿಯೆಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ಸುಗಮವಾಗಿ ನಡೆಸಿದ ಇವರ ಕಾರ್ಯವೈಖರಿಯ ಬಗ್ಗೆ ಸಂಘದ ಅದ್ಯಕ್ಷರಾಗಿ ಆಯ್ಕೆಯಾದ ಲೆನ್ಸಿ ಪಿಂಟೊ ಮತ್ತು ನಿರ್ದೇಶಕ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿದರು. ಸೊಸೈಟಿಯ ಮುಖ್ಯ ಸಲಹೆಗಾರ ಮೋನಪ್ಪ ಪೂಜಾರಿ ಕಡೆಂತ್ಯ್ಯಾರು ಉಪಸ್ಥಿತರಿದ್ದು, ಶುಭ ಹಾರೈಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಲೇರಿಯನ್ ಡಿ ಸೋಜಾ ಅವರು ವಂದಿಸಿದರು.

Exit mobile version