Site icon Suddi Belthangady

ಮಚ್ಚಿನ: ಪ್ರಾಥಮಿಕ ಶಾಲೆ ಕೆ.ಪಿ.ಎಸ್‌. ಶಾಲೆಯಾಗಿ ಮೇಲ್ದರ್ಜೆಗೆ: ಶಾಲಾಭಿವೃದ್ಧಿ ಸಮಿತಿಯಿಂದ ರಕ್ಷಿತ್ ಶಿವರಾಂಗೆ ಅಭಿನಂದನೆ

ಬೆಳ್ತಂಗಡಿ: ತಾಲೂಕಿನ ಮಚ್ಚಿನ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯನ್ನು ಕೆ.ಪಿ.ಎಸ್. ( ಕರ್ನಾಟಕ ಪಬ್ಲಿಕ್ ಸ್ಕೂಲ್ )ಶಾಲೆಯಾಗಿ ಸರ್ಕಾರ ಮೇಲ್ದರ್ಜೆಗೇರಿಸಿ ಆದೇಶಿಸಿದ್ದು, ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಶಾಲಾ ಅಭಿವೃದ್ಧಿ ಸಮಿತಿ ಅವರ ಮನವಿಯ ಮೇರೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮನವಿಯನ್ನು ಸಲ್ಲಿಸಿದ್ದಾರೆ. ಈ ಮನವಿಗೆ ಸಚಿವರು ಪೂರಕವಾಗಿ ಸ್ಪಂದಿಸಿ ಶಾಲೆಯನ್ನು ಕೆಪಿಎಸ್‌ ಶಾಲೆಯಾಗಿ ( ಕರ್ನಾಟಕ ಪಬ್ಲಿಕ್ ಸ್ಕೂಲ್) ಮೇಲ್ದರ್ಜೆಗೆರಿಸಿ ಆದೇಶವನ್ನು ಮಾಡಿದ್ದು, ಶಾಲಾ ಅಭಿವೃದ್ಧಿಯ ಮನವಿಗೆ ಸ್ಪಂದಿಸಿ ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೇರಿಸಲು ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಸಮಿತಿಯವರು ನ.3ರಂದು ಕಚೇರಿಯಲ್ಲಿ ಅಭಿನಂದನೆಯನ್ನು ಸಲ್ಲಿಸಿದರು.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಹಾಲಿ ಸದಸ್ಯ ಪ್ರಮೋದ್ ಕುಮಾರ್ ಮಚ್ಚಿನ, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಕೋರಬೆಟ್ಟು, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಘಟಕದ ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ ಮಚ್ಚಿನ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹರೀಶ್ ಕುದ್ಕೊಳಿ, ಅಶ್ರಫ್ ಕಾರಂದೂರು, ಕಿರಣ್ ಭಟ್, ರೊನಾಲ್ಡ್ ಕುದ್ಕೊಳಿ, ಸುಧೀರ್ ಬರೆದಾಡಿ, ಸಂಪತ್ ಪೂಜಾರಿ ಕೈಲಾ, ವಿದ್ಯಾ ಕುತ್ತಿನ, ಸವಿತಾ, ಕೇಶವ ಪೂಜಾರಿ ಉಪಸ್ಥಿತರಿದ್ದರು.

Exit mobile version