ಮಡಂತ್ಯಾರು: ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಕರಾಯ, ಪುಂಜಾಲಕಟ್ಟೆ ವಲಯ ಮತ್ತು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಸಹಯೋಗದಲ್ಲಿ ವಲಯ ಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಕ್ರೀಡಾಕೂಟ 2025-26 ನ. 3ರಂದು ಸೇಕ್ರೆಡ್ ಹಾರ್ಟ್ ಕ್ರೀಡಾಂಗಣದಲ್ಲಿ ನೆರವೇರಿತು.
ಕ್ರೀಡಾಕೂಟವನ್ನು ಪ್ರಾರ್ಥನ ಗೀತೆಯನ್ನು ಹಾಡಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಈ ಕ್ರೀಡಾಕೂಟದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕ ಡಾ| ಸ್ಟ್ಯಾನಿ ಗೋವಿಯಸ್ ಅವರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ಈ ಕ್ರೀಡಾಕೂಟವು ಒಳ್ಳೆಯ ರೀತಿಯಲ್ಲಿ ನೆರವೇರಲಿ, ಸೋಲು-ಗೆಲುವು ಎಂಬುದು ಕ್ರೀಡೆಯಲ್ಲಿ ಸಾಮಾನ್ಯ ಎಂದು ಹೇಳಿ, ಕ್ರೀಡಾಪಟುಗಳಿಗೆ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ರಾಜಶೇಖರ ಶೆಟ್ಟಿ ಅವರು ಆಗಮಿಸಿದ್ದರು. ಶಿಕ್ಷಕರ ರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಮಹಮ್ಮದ್ ಶರೀಫ್, ಚೇತನ, ರಾಜೇಶ್ ಅವರು, ಪುಂಜಾಲಕಟ್ಟೆ ವಲಯದ ನೋಡಲ್ ಅಧಿಕಾರಿ ಜಯರಾಜ್ ಜೈನ್, ಬೆಳ್ತಂಗಡಿ ತಾಲೂಕು ಮುಖ್ಯೋಪಾಧ್ಯಾಯರ ಸಂಘದ ನಿರ್ದೇಶಕ ಕೃಷ್ಣಪ್ಪ, ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ರವಿರಾಜ್, ಪುಂಜಾಲಕಟ್ಟೆ ವಲಯದ ನೋಡಲ್ ಅಧಿಕಾರಿ ಗೋಪಾಲ ಮತ್ತು ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕ್ರೀಡಾಕೂಟವನ್ನು ವಲೇರಿಯನ್ ಡಿಸೋಜರವರು ಸ್ವಾಗತಿಸಿ, ರಾಜೇಶ್ ಅವರು ನಿರೂಪಿಸಿ, ಚೇತನ ಅವರು ಧನ್ಯವಾದವನ್ನು ಸಮರ್ಪಿಸಿದರು.

