ಧರ್ಮಸ್ಥಳ: ಭಜನಾ ಪರಿಷತ್ ರಾಜ್ಯ ಸಂಚಾಲಕ ಜಿ. ಸುಬ್ರಮಣ್ಯ ಪ್ರಸಾದ್ ಅವರ ಮಾರ್ಗದರ್ಶನದೊಂದಿಗೆ “ಒಂದೇ ದಿನ ದಕ್ಷಿಣ ಕನ್ನಡ ಜಿಲ್ಲೆಯ 3 ” ಕಡೆಗಳಲ್ಲಿ ಭಜನಾ ತರಬೇತಿ ಕಾರ್ಯಕ್ರಮ ನಡೆಯಿತು. ಭಜನಾ ಕಮ್ಮಟದ ಹಿರಿಯ ತರಬೇತುದಾರರಾದ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ ಅವರ ಮುಂದಾಳುತ್ವದಲ್ಲಿ ನಡೆಯುವ ವಿಶ್ವಗೀತಾ ಪರ್ಯಾಯ 2024 – 2026 ಗೀತೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸಹಯೋಗದೊಂದಿಗೆ ನ. 30ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಭಜನೋತ್ಸವ, ಭಗವದ್ಗೀತಾ ಪಠಣ ಕಾರ್ಯಕ್ರಮ ಭರ್ಜರಿ ಪೂರ್ವತಯಾರಿ ನಡೆಯುತ್ತಿದೆ.
8ರಿಂದ ಧರ್ಮಸ್ಥಳ ನಾರ್ಯ ಸಮೀಪದ ಪೊದುಂಬಿಲ ಶ್ರೀ ಷಣ್ಮುಖ ಭಜನಾ ಮಂಡಳಿಯ ಸಹಕಾರದೊಂದಿಗೆ ನಡೆಯಿತು. ಅನಂತರ ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಸಭಾಂಗಣ, ಹಾಗೂ ಬಂಗಾಡಿಯ ಕೊಲ್ಲಿಯ ಕಿಲ್ಲೂರು ಮಾರಿಗುಡಿಯಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು. ಭಜನಾ ತರಬೇತಿ ಗುರುಗಳಾದ ನಾಗೇಶ್ ಬಿ. ನೆರಿಯ ಅವರ ಸಮರ್ಥ ನಿರ್ವಹಣೆಯೊಂದಿಗೆ ಯಶಸ್ವೀ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ನೂರಾರು ಭಜಕರು ತರಬೇತಿಯಲ್ಲಿ ಪಾಲ್ಗೊಂಡು ಸದುಪಯೊಗ ಪಡೆದುಕೊಂಡರು. ವಿದುಷಿ ಉಷಾ ಹೆಬ್ಬಾರ್, ಭಜನಾ ಪರಿಷತ್ ರಾಜ್ಯಾದ್ಯಕ್ಷ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು, ಕುಣಿತ ಭಜನಾ ಗುರು ನಾಗೇಶ್ ಬಿ. ನೆರಿಯ, ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು, ಬೆಳ್ತಂಗಡಿ ತಾಲೂಕು ಪರಿಷತ್ ಉಪಾದ್ಯಕ್ಷ ರವಿ ಚಾರ್ಮಾಡಿ, ದೇವಸ್ಥಾನ ಹಾಗೂ ಭಜನಾ ಮಂಡಳಿಗಳ ಪ್ರಮುಖರುಗಳು, ಭಜನಾ ಪರಿಷತ್ ತಾಲೂಕು ಮತ್ತು ವಲಯ ಪರಿಷತ್ ಪದಾಧಿಕಾರಿಗಳು, ಗುರುವಾಯನಕೆರೆ ತಾಲೂಕು ಪರಿಷತ್ ಕಾರ್ಯದರ್ಶಿ ಸಂದೇಶ್ ಮದ್ದಡ್ಕ, ಕುಣಿತ ಭಜನಾ ತರಬೇತುದಾರರು, ಸಂಗೀತಗಾರರಾದ ಸಾವಿತ್ರಿ, ಲಾವಣ್ಯ, ಪೊಷಕರು ಹಾಗೂ ಸದ್ಭಕ್ತ ನಾಗರೀಕ ಬಂಧುಗಳು ಉಪಸ್ಥಿತರಿದ್ದರು.

