Site icon Suddi Belthangady

ಗೇರುಕಟ್ಟೆ: ಪತಂಜಲಿ ಯೋಗಶಾಖೆಯಲ್ಲಿ ತುಳಸಿ ಪೂಜೆ

ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ.ರಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಕ್ಷೀರ ಸಂಗಮ ಸಬಾಭವನ ಕಳಿಯ ಗೇರುಕಟ್ಟೆ ಯೋಗ ಶಾಖೆಯಲ್ಲಿ ತುಳಸಿ ಪೂಜೆಯನ್ನು ನೆರವೇರಿಸಲಾಯಿತು

ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್, ಸಹ ಶಿಕ್ಷಕ ಸುಕೇಶ್ ನೇತೃತ್ವದಲ್ಲಿ ನಡೆಯುತ್ತಿರುವ ನಿತ್ಯ ಯೋಗ ತರಗತಿಯನ್ನು ಸತೀಶ್ ನಾಳ ನಿರ್ವಹಿಸಿದರು. ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ತುಳಸಿ ವಿವಾಹ,ತುಳಸಿ ಪೂಜೆಯ ಮಹತ್ವ,ಲೌಕಿಕ ಮತ್ತು ಆಧ್ಯಾತ್ಮಿಕ, ಧಾರ್ಮಿಕ ವಿಧಿ ವಿಧಾನಗಳಲ್ಲಿ ತುಳಸಿಯ ಮಹತ್ವ ಮತ್ತು ತುಳಸಿಯಿಂದ ಸಿಗುವ ಪ್ರಯೋಜನಗಳ ಬಗ್ಗೆ ಭೌದ್ಧಿಕ ನೀಡಿದರು.

ಶಾಖೆಯ ಸಹಶಿಕ್ಷಕ ಸುಕೇಶ್, ವರದಿ ಪ್ರಮುಖ ಕೇಶವ,ಶಾಖೆಯ ಸಂಚಾಲಕ ವಿಜಯಣ್ಣ,ಸತೀಶ್, ಅಶೋಕ, ವಸಂತ ಉಪಸ್ಥಿತರಿದ್ದರು.

ಭಾರತಿ, ಪದ್ಮಲತಾ, ಅರುಣ ತುಳಸಿ ಪೂಜೆಯನ್ನು ನೆರವೇರಿಸಿ ಪೂಜಾ ಪ್ರಸಾದ ವಿತರಿಸಲಾಯಿತು. ಶಾಖೆಯ ಯೋಗಬಂಧುಗಳ ಸಹಕಾರದಿಂದ ಅಮೃತ ಫಲಾಹಾರವನ್ನು ಜೋಡಿಸಲಾಗಿತ್ತು.

Exit mobile version