Site icon Suddi Belthangady

ಬೆಳ್ತಂಗಡಿ: ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕಕ್ಕೆ ಚಾಲನೆ-ಆರ್ಯನುಬಂಧ ಟೆಲಿ ಫಿಲ್ಮ್ ಟೈಟಲ್ ಬಿಡುಗಡೆ

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ವತಿಯಿಂದ
ದೀಪಾವಳಿ ಹಬ್ಬದ ಪ್ರಯುಕ್ತ ನಡೆದ 6ನೇ ವರ್ಷದ ದೋಸೆಹಬ್ಬ ಕಾರ್ಯಕ್ರಮದಲ್ಲಿ ಪ್ರದರ್ಶನ ನಡೆಯುತ್ತಿದ್ದ ವೇಳೆ ಪೊಲೀಸರು ತಡೆಗೊಳಿಸಿದ ತುಳು ಸಾಮಾಜಿಕ ನೀತಿಬೋಧಕ ನಾಟಕ ಜೈ ಭಜರಂಗ ಬಲಿ ನಾಟಕ ಮತ್ತೊಮ್ಮೆ ಪ್ರದರ್ಶನ ನ.1ರಂದು ಸಂಜೆ 6ಗಂಟೆಗೆ ಸರಿಯಾಗಿ, ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನ ಜೈನ್ ಪೇಟೆಯಲ್ಲಿ ಪ್ರದರ್ಶನಗೊಂಡಿತು.

ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಚಾಲನೆ ನೀಡಿದರು. ಶಾಸಕ ಹರೀಶ್ ಪೂಂಜ, ಸುಲ್ಕೇರಿಮೊಗ್ರು ಸೊಸೈಟಿ ಅಧ್ಯಕ್ಷರು ಸುಧೀರ್ ಸುವರ್ಣ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಕೊರಗಪ್ಪ ಗೌಡ, ನಗರ ಪಂಚಾಯತ್ ಸದಸ್ಯ ಶರತ್, ಐಸಿರಿ ತಂಡದ ಸುಧೀರ್ ಕೃಷ್ಣ ಮಂಜೇಶ್ವರ,ಯುವ ಮೋರ್ಚಾ ನಿತಿನ್, ಜಯಪ್ರಕಾಶ್ ಕಡಮಾಜೆ, ಉಮೇಶ್ ಉಪಸ್ಥಿತರಿದ್ದರು.

ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಸ್ವಾಗತಿಸಿದರು. ಕೊಯ್ಯೂರಿನ ಯುವತಿ ಮೋನಿಕಾ ನಿರ್ಮಿಸಿದ ಆರ್ಯನ್ ಬಂದ ಟೆಲಿ ಕನ್ನಡ ಟೆಲಿ ಫಿಲ್ಮ್ ನ ಟೈಟಲ್ ಶಾಸಕ ಹರೀಶ್ ಪೂಂಜ ಬಿಡುಗಡೆಗೊಳಿಸಿದರು.

Exit mobile version