Site icon Suddi Belthangady

ಶಿಶಿಲ: ಶಿಶಿಲೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಬಾಕಿ ಇದ್ದ ಎರಡು ಸದಸ್ಯ ಸ್ಥಾನ ಭರ್ತಿ: ಸದಸ್ಯರಾಗಿ ಆಯ್ಕೆಯಾದ ಕೆ.ಶ್ರೀಧರ್ ರಾವ್ ಕಾಯಡ ಮತ್ತು ಪಿ.ನಾರಾಯಣ ಪೂಜಾರಿ

ಶಿಶಿಲ: ಶಿಶಿಲೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಬಾಕಿ ಇದ್ದ ಎರಡು ಸದಸ್ಯ ಸ್ಥಾನ ಭರ್ತಿಗೆ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದ್ದು ಬೆಳಾಲು ಗ್ರಾಮದ ಮಂಜನೊಟ್ಟು ಪಿ. ನಾರಾಯಣ ಪೂಜಾರಿ ಮತ್ತು ಕಳೆಂಜ ಗ್ರಾಮದ ಕಾಯಡ ಶ್ರೀಧರ್ ರಾವ್ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಇಲಾಖೆ ಈ ಹಿಂದೆ ಜುಲೈ ತಿಂಗಳಲ್ಲಿ 11ಅರ್ಜಿಗಳ ಪೈಕಿ ಪರಿಶೀಲನೆ ನಡೆಸಿ 7 ಮಂದಿ ಸದಸ್ಯರನ್ನೊಳಗೊಂಡ ವ್ಯವಸ್ಥಾಪನ ಸಮಿತಿಯನ್ನು ರಚಿಸುವಂತೆ ಆದೇಶ ಹೋರಡಿಸಿತ್ತು. ಅದಾದ ಬಳಿಕ ತೆರವಾಗಿದ್ದ ಎರಡು ಸ್ಥಾನಕ್ಕೆ ಅರ್ಜಿಗಳು ಬಂದಿದ್ದರಿಂದ ಪುನಃ ಪರಿಶೀಲನೆ ನಡೆಸಿ ಅ. 8ರಂದು ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಮಂಡಿಸಿದ ಬಳಿಕ ಧಾರ್ಮಿಕ ದತ್ತಿ ಇಲಾಖೆ ನೇಮಕ ಗೊಳಿಸುವಂತೆ ಅದೇಶಿಸಿದೆ.

ನೂತನ ವಾಗಿ ಆಯ್ಕೆ ಆಗಿರುವ ಸದಸ್ಯರ ಪೈಕಿ ಶ್ರೀಧರ್ ರಾವ್ ಕಾಯಡ ಅವರು ಪ್ರಸ್ತುತ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೊರ್ವ ಸದಸ್ಯರಾದ ಪಿ. ನಾರಾಯಣ ಪೂಜಾರಿ ಅವರು ಈ ಹಿಂದೆ ಕೃಷಿ ಅಧಿಕಾರಿಯಾಗಿದ್ದ ಸಂಧರ್ಭದಲ್ಲಿ ಶಿಶಿಲೇಶ್ವರ ದೇವಳದ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ ಎಂದು ತಿಳಿದು ಬಂದಿದೆ.

Exit mobile version