ಕರಂಬಾರು: ಸ.ಹಿ.ಪ್ರಾ. ಶಾಲೆಯಲ್ಲಿ ಅ. 30ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಶಾಲಾಭಿವೃದ್ಧಿಸ ಸಮಿತಿ ರಚನಾ ಕಾರ್ಯಾಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ ಅಳದಂಗಡಿ ಪ್ರೌಢ ಶಾಲೆಯ ಶಿಕ್ಷಕ ಉಮೇಶ್ ಮಾರ್ಗದರ್ಶನ ಅಧಿಕಾರಿ ಶಿಕ್ಷಣ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಅವಧಿ ಮುಗಿದಿರುವ ಶಾಲಾಭಿವೃದ್ಧಿ ಸಮಿತಿಯನ್ನು ಪುನರ್ ರಚನೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಎಂ.ಕೆ., ಉಪಾಧ್ಯಕ್ಷರಾಗಿ ವಿಜಯಾ, ಸದಸ್ಯರುಗಳಾಗಿ ಶರ್ಮಿಳಾ, ಶೋಭಾ, ಸಂಗೀತ, ಸದಾಶಿವ ಕುಮಾರ್, ವಸಂತ ನಾಯ್ಕ, ಧರಿತ್ರಿ ವಿವೇಕ್, ಉಷಾ ಆರ್. ದೇವಾಡಿಗ, ಶೋಭಾ ಡಿ. ದೇವಾಡಿಗ, ಸೆಕ್ಕಿನಾ ಇಸ್ಮಾಯಿಲ್, ಸಫ್ರೀನಾ, ನಸೀಮಾ, ಅಸ್ಮಾ, ರಝೀಯ, ಅಸ್ಮಾ, ಸ್ವಾದಿಕಾ, ಝೀನತ್, ಅವರನ್ನು ಕರಂಬಾರು ಶಾಲಾಭಿವೃದ್ಧಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ರಮೇಶ್ ಛಾವಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಶಾಲಾ ಶಿಕ್ಷಕರಾದ ಸಾವಿತ್ರಿ, ತಸ್ಮಿಯ, ಲತಾ, ಸ್ವಾತಿ, ಚೈತ್ರ ಸಹಕರಿಸಿದರು. ಮಕ್ಕಳ ಪೋಷಕರು, ಬಿಸಿ ಊಟ ನೌಕರರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸಿ.ಆರ್.ಪಿ ಕಿರಣ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಜ್ಞಾನ ದೀಪ ಶಿಕ್ಷಕರಾದ ಸದಾಶಿವ ಕುಮಾರ್ ಧನ್ಯವಾದ ಸಲ್ಲಿಸಿದರು.

