Site icon Suddi Belthangady

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪ್ಪೊದಲ್ಲಿ ಉಚಿತ ರಕ್ತದೊತ್ತಡ, ಮಧುಮೇಹ ಪರೀಕ್ಷೆ

ಬೆಳ್ತಂಗಡಿ: ಘಟಕ ರೆಡ್ ಕ್ರಾಸ್ ಸೊಸೈಟಿ, ಧರ್ಮಸ್ಥಳ ಜ್ಯೂನಿಯರ್ ರೆಡ್ ಕ್ರಾಸ್, ಧರ್ಮಸ್ಥಳ ಆಂಗ್ಲ ಮಾದ್ಯಮ ಶಾಲೆ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಂದು ಧರ್ಮಸ್ಥಳ KSRTC ಡಿಪ್ಪೊ ದಲ್ಲಿ ಉಚಿತ ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಲಾಯಿತು.

ಕಾರ್ಯಕ್ರಮವನ್ನು KSRTC ಧರ್ಮಸ್ಥಳ ಡಿಪ್ಪೊ ಮ್ಯಾನೇಜರ್ ರಮ್ಯ ಕೆ.ಎಮ್. ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ಬೆಳ್ತಂಗಡಿ ಘಟಕದ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಹರಿದಾಸ್ ಎಸ್.ಎಂ., ಕಾರ್ಯದರ್ಶಿ ಯಶವಂತ್ ಪಟವರ್ಧನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸದಸ್ಯರು, ಧರ್ಮಸ್ಥಳ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ., ಸಹ ಶಿಕ್ಷಕರಾದ ಜ್ಯೋತಿ ಲಕ್ಷ್ಮಿ, ಸನ್ಮತಿ, ಜ್ಯೂನಿಯರ್ ರೆಡ್ ಕ್ರಾಸ್ ಧರ್ಮಸ್ಥಳ ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು. KSRTC ಧರ್ಮಸ್ಥಳ ಡಿಪ್ಪೊದಲ್ಲಿರುವ ಸಿಬ್ಬಂದಿಗಳಿಗೆ, KSRTC ಬಸ್ ಚಾಲಕ, ನಿರ್ವಾಹಕರಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಚಿತವಾಗಿ ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಲಾಯಿತು.

Exit mobile version