Site icon Suddi Belthangady

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಿಗೆ ಹರೀಶ್ ಪೂಂಜರಿಂದ ಅಭಿನಂದನೆ

ಬೆಳ್ತಂಗಡಿ: 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ವಿವಿಧ ಸಾಧಕರು ಆಯ್ಕೆಯಾಗಿದ್ದು, ಕಂಬಳಕ್ಷೇತ್ರದಲ್ಲಿ ಹೆಸರು ಮಾಡಿದ ಓಟಗಾರ ಸುಲ್ಕೇರಿಮೊಗ್ರು ಗ್ರಾಮದ ಸತೀಶ್‌ ದೇವಾಡಿಗ, ಮರದ ಕೆತ್ತನೆ ಶಿಲ್ಪಿ ಶಶಿಧರ ಆಚಾರ್ಯ ಬೆಳಾಲು, ರಂಗಭೂಮಿ ಕಲಾವಿದ ಹರೀಶ್ ಕುಮಾ‌ರ್ ಕೊಕ್ರಾಡಿ ಹಾಗೂ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಮತ್ತು ಸಮಾಜ ಸೇವೆಗೆ ಬೆಳ್ತಂಗಡಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ, ಅವಿನಾಶ್ ರಾವ್ ಕೃಷಿ ಆಧಾರಿತ ಉದ್ಯಮಿಯವರು ಆಯ್ಕೆಯಾಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಎಲ್ಲರಿಗೂ ಶಾಸಕ ಹರೀಶ್ ಪೂಂಜರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version