ವೇಣೂರು: ಬೆಳ್ತಂಗಡಿ ತಾಲೂಕು ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ 16ನೇ ವಾರ್ಷಿಕ ಮಹಾಸಭೆ ಅ.28ರಂದು ಲಯನ್ಸ್ ಕ್ಲಬ್ ಸಭಾಭವನ ವೇಣೂರಿನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಚಂದ್ರಶೇಖರ್ ಎಂ. ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಗೌರವ ಅಧ್ಯಕ್ಷ ಸುನಿಲ್ ಲೋಬೊ, ರಾಜ್ಯ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಉಪ ಕಾರ್ಯದರ್ಶಿ ರಾಜಶೇಖರ ಶೆಟ್ಟಿ, ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಅಧ್ಯಕ್ಷ ಧನರಾಜ್ ಶೆಟ್ಟಿ, ಬೆಳ್ತಂಗಡಿ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಗೇರುಕಟ್ಟೆ ಜ್ಯೋತಿ ಎಂಟರ್ ಪ್ರೈಸಸ್ ನ ಹರೀಶ್ ಕುಮಾರ್, ಮಾಜಿ ಅಧ್ಯಕ್ಷ, ವೇಣೂರು ಪದ್ಮಾಂಬ ಇಲೆಕ್ಟ್ರಾನಿಕ್ಸ್ ಜಿನರಾಜ್ ಜೈನ್, ಸುಪ್ರೀಮ್ ಡೆಕೋರೇಟಿವ್ ಲೈಟ್ & ಸೌoಡ್ಸ್ ಸಿಸ್ಟಮ್ ಮಾಲಕ ಮೂಸಬ್ಬ, ಜಿಲ್ಲಾ ಪದಾಧಿಕಾರಿಗಳಾದ ಸಂಜೀವ ಬಿ.ಎಚ್., ನಾರಾಯಣ ಗೌಡ, ಕ್ರೀಡಾ ಕಾರ್ಯದರ್ಶಿ ಮೊಹಮ್ಮದ್ ಸಮೀರ್, ಸಂಘದ ಕಾರ್ಯದರ್ಶಿ ಪಪ್ಪು ಸೌoಡ್ಸ್ ನ ಮೊಹಮ್ಮದ್ ಸಬೀರ್, ಸಂಘದ ಉಪಾಧ್ಯಕ್ಷ ಜೋಸೆಫ್ ಕೆ.ಡಿ., ಉಪಸ್ಥಿತರಿದ್ದರು.
2024-2025ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಖಿಲ್ ಮೋಹನ್ ವಾಚಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಮಾತುಕುಟ್ಟಿ ಧರ್ಮಸ್ಥಳ ಮಂಡಿಸಿದರು. ಸಂಘದ ಹಿರಿಯ ಸದಸ್ಯರಾದ ಗಂಗಾಧರ ನಾಯ್ಕ, ಶೀನಪ್ಪ ಗೌಡ, ಪೂವಪ್ಪ ನಾಯ್ಕ ಅವರನ್ನು ಗೌರವ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಜನಾರ್ದನ ಶೆಟ್ಟಿ ಮಡಂತ್ಯಾರು ನಿರೂಪಿಸಿದರು. ಮಾತುಕುಟ್ಟಿ ಧನ್ಯವಾದ ನೀಡಿದರು.

