ಬೆಳ್ತಂಗಡಿ: ಕಿನ್ನಿಗೋಳಿ ಸೈಂಟ್ ಮೇರೀಸ್ ವಿಶೇಷ ಚೇತನ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ದಯಾ ವಿಶೇಷ ಶಾಲೆಗೆ ಅ.25ರಂದು ಭೇಟಿ ನೀಡಿದರು. ಸೈಂಟ್ ಮೇರೀಸ್ ವಿಶೇಷ ಚೇತನ ಶಾಲೆಯ ಸಂಚಾಲಕ ಫಾ. ಜೋಕಿಮ್ ಫೆರ್ನಾಂಡೀಸ್ ಅವರು, ಶಾಲೆಯ ಮುಖ್ಯ ಶಿಕ್ಷಕಿ ರೇಶ್ಮಾ, ಶಾಲೆಯ ಟ್ರಸ್ಟೀಗಳಾದ ಮೈಕಲ್, ರಿಚಾರ್ಡ್ ಮತ್ತು ಶೈಲಾ ಹಾಗೂ ಶಾಲೆಯ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ದಯಾ ವಿಶೇಷ ಶಾಲೆಯ ಸಂಚಾಲಕ ಫಾ.ವಿನೋದ್ ಮಸ್ಕರೇನಸ್ ಅವರು ದಯಾ ವಿಶೇಷ ಶಾಲೆ ಮತ್ತು ಇದರ ಮಾತೃ ಸಂಸ್ಥೆ ಕಪುಚಿನ್ ಕೃಷಿಕ ಸೇವಾ ಕೇಂದ್ರ ಇದರ ಕಾರ್ಯಚಟುವಟಿಕೆಗಳು ಮತ್ತು ವಿವಿಧ ಯೋಜನೆಗಳ ಬಗ್ಗೆ ವಿವರಿಸಿ ಶಾಲೆಯ ಎಲ್ಲಾ ಕಾರ್ಯವೈಖರಿಗಳ ಮತ್ತು ಮಕ್ಕಳಿಗೆ ನೀಡಲಾಗುತ್ತಿರುವ ವಿವಿಧ ತರಬೇತಿಗಳು ಮತ್ತು ಸೌಲಭ್ಯಗಳನ್ನು ಪರಿಚಯಿಸಿ, ವಿವರಿಸಿದರು. ನಂತರ ದಯಾ ವಿಶೇಷ ಚೇತನ ಶಾಲೆಯ ಸಿಬ್ಬಂದಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿ ವಿಚಾರ ವಿನಿಮಯವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ದಯಾ ವಿಶೇಷ ಶಾಲೆಯ ವಿಶೇಷ ಶಿಕ್ಷಕರು ಉಪಸ್ಥಿತರಿದ್ದರು.

