Site icon Suddi Belthangady

ಬೆಳ್ತಂಗಡಿ: ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕ ನ. 1ರಂದು ಮತ್ತೊಮ್ಮೆ ಪ್ರದರ್ಶನ

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ 6ನೇ ವರ್ಷದ ದೋಸೆಹಬ್ಬ ಕಾರ್ಯಕ್ರಮದಲ್ಲಿ ಪ್ರದರ್ಶನ ನಡೆಯುತ್ತಿದ್ದ ವೇಳೆ ಪೊಲೀಸರು ತಡೆಗೊಳಿಸಿದ ತುಳು ಸಾಮಾಜಿಕ ನೀತಿಬೋಧಕ ನಾಟಕ ಜೈ ಭಜರಂಗ ಬಲಿ ನಾಟಕ ಮತ್ತೊಮ್ಮೆ ಪ್ರದರ್ಶನಗೊಳ್ಳಲಿದೆ. ನ.1ರಂದು ಸಂಜೆ 6ಗಂಟೆಗೆ ಸರಿಯಾಗಿ, ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನ ಜೈನ್ ಪೇಟೆಯಲ್ಲಿ ನಡೆಯಲಿದೆ. ಕಲಾಭಿಮಾನಿಗಳು ಈ ನಾಟಕ ವೀಕ್ಷಿಸಿ, ಕಾರ್ಯಕ್ರಮ ಯಶ್ವಸ್ವಿಗೊಳಿಸಬೇಕಾಗಿ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version