ಬೆಂಗಳೂರು: ಬುರುಡೆ ಪ್ರಕರಣದಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಪೂರ್ಣ ಪ್ರಕರಣವನ್ನೇ ( FIR NO 39/2025) ರದ್ದುಕೋರಿ ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಇಡೀ ಪ್ರಕರಣವನ್ನೇ ರದ್ದುಗೊಳಿಸಬೇಕೆಂದು ಹೈಕೋರ್ಟ್ ನಲ್ಲಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್, ವಿಠಲಗೌಡ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅ.24 ರಂದು ನೀಡಿರುವ ನೋಟಿಸ್ ರದ್ದಿಗೂ ಮನವಿ ಮಾಡಲಾಗಿದೆ. ಖುದ್ದಾಗಿ ನೋಟಿಸ್ ನೀಡದೇ ವಾಟ್ಸ್ ಆ್ಯಪ್, ಇ ಮೇಲ್ ನಲ್ಲಿ ನೀಡಿದ್ದಾರೆ.
ಹಲವು ಬಾರಿ ವಿಚಾರಣೆಗೆ ಕರೆದು 100 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಿದ್ದಾರೆ. ದೂರಿನಲ್ಲಿ 164 ಹೇಳಿಕೆಯಲ್ಲಿ ತಮ್ಮ ವಿರುದ್ಧ ಆರೋಪಗಳಿಲ್ಲ.ಆದರೂ ನೋಟಿಸ್ ನೀಡಿದ್ದಾರೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

