Site icon Suddi Belthangady

ಕನ್ಯಾಡಿ: ಕಾರು – ಬೈಕ್ ಅಪಘಾತ-ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಮೃತ್ಯು

ಕನ್ಯಾಡಿ: ಸಮೀಪ ಕಾರು ಹಾಗೂ ಬೈಕ್‌ ನಡುವೆ ಡಿಕ್ಕಿಯಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ಅ.29ರಂದು ವರದಿಯಾಗಿದೆ.

ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಬೈಕ್‌ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ನಾವೂರಿನ ಹೊಡಿಕ್ಕಾರು ನಿವಾಸಿ ಕಬ್ಬಡಿ ಕ್ರೀಡಾಪಟು ಚಂದ್ರಹಾಸ(28ವ) ಅವರಿಗೆ ತಲೆ ಹಾಗೂ ಕಾಲಿಗೆ ಬಲವಾದ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮೃತರು ತಂದೆ ಗಂಗಯ್ಯ, ತಾಯಿ ಕುಸುಮ ಹಾಗೂ ಸಹೋದರಿಯರಾದ ಲೀಲಾವತಿ ಮತ್ತು ಸುಮಲತಾ ಅವರನ್ನು ಅಗಲಿದ್ದಾರೆ.

Exit mobile version