ಬೆಳ್ತಂಗಡಿ: ಸುರ್ಯ ಶೀ ಸದಾಶಿವರುದ್ರ ದೇವಸ್ಥಾನದ ಬಳಿ ನೂತನವಾಗಿ ನಿರ್ಮಿಸಿರುವ ಕನ್ನಿಕಾ ಲಾಡ್ಜ್ ಹಾಗೂ ವಾಣಿಜ್ಯ ಮಳಿಗೆ ಅ.29ರಂದು ಉದ್ಘಾಟನೆಗೊಂಡಿದೆ. ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ ಸ್ವಾಮಿಜಿಯವರು ದೀಪ ಪ್ರಜ್ವಲನೆ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಪ್ರಮುಖರಾದ ಹಷೇಂದ್ರ ಕುಮಾರ್, ರಾಘವೇಂದ್ರ ಗುಡಿಗಾರ್, ದಯಾನಂದ ಗುಡಿಗಾರ್, ನವೀನ್ ಕನ್ಯಾಡಿ, ಸುಧೀಶ್ ಕನ್ಯಾಡಿ, ಸಚಿನ್ ಕಲ್ಮಂಜ ಮತ್ತಿತರರು ಉಪಸ್ಥಿತರಿದ್ದರು. ಕಟ್ಟಡ ಮಾಲಕರಾದ ಸರೋಜಿನಿ ಮತ್ತು ವಿಶ್ವನಾಥ್ ಕೆ. ಅತಿಥಿಗಳನ್ನು ಸ್ವಾಗತಿಸಿ, ಸತ್ಕಾರಿಸಿದರು.

