ಉಜಿರೆ: ಮೂಡಬಿದ್ರೆಯ ಎಂ.ಕೆ. ಆನಂತ್ರಾಜ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮತ್ತು ಶೋರಿನ್ ರಿಯು ಕರಾಟೆ ಆಸೋಸಿಯೇಶನ್ ಆಶ್ರಯದಲ್ಲಿ ಸ್ವಾಮೀಸ್ ಸ್ಟ್ರೇಂಥ್ ಟ್ರೈನಿಂಗ್ ಸಹಯೋಗದೊಂದಿಗೆ ಅ.25ರಂದು ಮೂಡಬಿದ್ರೆ ಸ್ಕೌಟ್ -ಗೈಡ್ಸ್ ಕನ್ನಡ ಭವನದಲ್ಲಿ ನಡೆದ 8ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಫ್ 2025ರಲ್ಲಿ ಕಟಾ ಮತ್ತು ಪೈಟಿಂಗ್ ವಿಭಾಗದಲ್ಲಿ ಉಜಿರೆ SDM ಕಾಲೇಜಿನ ಪ್ರಥಮ ಪಿ.ಯು. ವಿದ್ಯಾರ್ಥಿ ಬಂಗಾಡಿಯ ಶ್ರೀಚರಣ್ ಜೈನ್ ದ್ವಿತೀಯ ಸ್ಥಾನ ಪಡೆದು ಎರಡು ಬೆಳ್ಳಿ ಪದಕ ಗಳಿಸಿದ್ದಾರೆ.
ಅವರು ಬಂಗಾಡಿ ಪೇಟೆಯ ಪ್ರೇಮಾ ಜಯರಾಜ್ ಇಂದ್ರ ದಂಪತಿಯ ಪುತ್ರ. ಶಿಹಾನ್ ಅಬ್ದುಲ್ ರಹಿಮಾನ್ ತರಬೇತಿ ನೀಡಿದ್ದರು.

