Site icon Suddi Belthangady

ಉಪ್ಪಿನಂಗಡಿ: ಕೈಲಾರು ವಾಸ್ತುಗಿಡ ಸನ್ನಿಧಿಗೆ ವಿಖ್ಯಾತನಂದ ಸ್ವಾಮೀಜಿ ಭೇಟಿ

ಬೆಳ್ತಂಗಡಿ: ಉಪ್ಪಿನಂಗಡಿ ಕೈಲಾರು ವಾಸ್ತುಗಿಡ ಸನ್ನಿಧಿಗೆ ಬೆಂಗಳೂರಿನ ಸೋಲೂರು ಮಠದ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ವಿಖ್ಯಾತನಂದ ಸ್ವಾಮೀಜಿ ಅವರು ಭೇಟಿ ನೀಡಿ, ಕೈಲಾರು ರಾಜಗೋಪಾಲ ಭಟ್ ಅವರಿಂದ ವಾಸ್ತುಗಿಡವನ್ನು ಪಡೆದುಕೊಂಡರು.

ವಾಸ್ತುಗಿಡ ಸನ್ನಿಧಿಗೆ ಭೇಟಿ ನೀಡಿದ ಶ್ರೀಗಳು, ಕೈಲಾರು ರಾಜಗೋಪಾಲ ಭಟ್ ಅವರು ಸುಮಾರು 20 ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ನೀಡುತ್ತಿರುವ ವಾಸ್ತು ಗಿಡದ ಬಗ್ಗೆ ಹಾಗೂ ಇಲ್ಲಿಗೆ ಬಂದು ನೆಮ್ಮದಿಯ ಬದುಕು ಕಂಡುಕೊಂಡವರ ಬಗ್ಗೆ ತಿಳಿದು ಸಂತಸ ವ್ಯಕ್ತಪಡಿಸಿದರು. ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಜಿ., ವ್ಯವಸ್ಥಾಪಕ ಎಲ್ಯಣ್ಣ ಎಸ್., ಸಿಬ್ಬಂದಿ ಪ್ರದೀಪ್‌, ಮುರಳೀಧರ ಉಪಸ್ಥಿತರಿದ್ದರು.

Exit mobile version