Site icon Suddi Belthangady

ಕುಪ್ಪೆಟ್ಟಿ: ಶ್ರೀ ಗಣೇಶ ಭಜನಾ ಮಂದಿರದ ಮಹಾಗೋಪುರ ಮತ್ತು ಸಮುದಾಯ ಭವನದ ಲೋಕಾರ್ಪಣೆಯ ಪೂರ್ವಭಾವಿ ಸಭೆ

ಕುಪ್ಪೆಟ್ಟಿ: ಶ್ರೀ ಗಣೇಶ ಭನಜಾ ಮಂದಿರದ ನೂತನ ಮಹಾಗೋಪುರ ಮತ್ತು ಸಮುದಾಯ ಭವನದ ಲೋಕಾರ್ಪಣೆಯ ಪೂರ್ವಭಾವಿ ಸಭೆಯನ್ನು ಅ.23ರಂದು ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ಬೆಳ್ತಂಗಡಿಯ ಜನಪ್ರಿಯ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಭಜನಾ ಮಂದಿರ ಮಹಾಗೋಪುರ ಹಾಗೂ ಸಮುದಾಯ ಭವನದ ಲೋಕಾರ್ಪಣೆಯು ಡಿ. 6,7,8ರಂದು ಮೂರು ದಿನದ ವಿವಿಧ ಧಾರ್ಮಿಕ ಸಾಂಸ್ಕ್ರತಿಕ ಕಾರ್ಯ ಕ್ರಮಗಳೊಂದಿಗೆ ನಡೆಯಲಿರುವುದು. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಮೈಸೂರಿನ ರಾಜಮನೆತನದ ಯುದುವೀರ್ ಕೃಷ್ಣದತ್ತ ಒಡೆಯರ್ ಯಶಸ್ವಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಸಭೆಯಲ್ಲಿ ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ಅತುಲ್ ಕುಮಾರ್ ಹಲೇಜಿ, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಯೋಗೀಶ್ ಕುಮಾರ್ ಕಡ್ತಿಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ಚಿಚಾರಕ ವಿಶ್ವನಾಥ ಪೂಜಾರಿ ಹಾಗೂ ವಿವಿಧ ಧಾರ್ಮಿಕ ಸಾಮಾಜಿಕ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ಚಿಚಾರಕ ವಿಶ್ವನಾಥ ಪೂಜಾರಿ ಹಾಗೂ ವಿವಿಧ ಧಾರ್ಮಿಕ ಸಾಮಾಜಿಕ ಕ್ಷೇತ್ರದ ಮುಖಂಡರಾದ ವಸಂತ ಮಜಲು, ರಕ್ಷಿತ್ ಪಣಿಕ್ಕರ ಜಯಾನಂದ ಕಲ್ಲಾಪು ಸೀತಾರಾಮ ಮಡಿವಾಳ, ಕಣಿಯೂರು ಜಿ.ಪಂ. ವ್ಯಾಪ್ತಿಯ ಎಲ್ಲಾ ಭಜನಾ ಮಂಡಳಿಯ ದೇವಸ್ಥಾನದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗೌರಿ ಗಣೇಶ ಮಾತೃ ಮಂಡಳಿಯ ಪದಾಧಿಕಾರಿಗಳು ಹಾಗೂ ಊರಿನ ಸಮಸ್ತ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೋಹಿತ ಶೆಟ್ಟಿ ಕುಪ್ಪೆಟ್ಟಿ ಸ್ವಾಗತಿಸಿ, ಹರೀಶ್ ಶೆಟ್ಟಿ ನರ್ಸಪಾಲು ವಂದಿಸಿದರು.

Exit mobile version