ಪಣಕಜೆ: ಬೆಳ್ತಂಗಡಿ ತಾಲೂಕಿನಲ್ಲಿಯೇ ಪ್ರಪ್ರಥಮವಾಗಿ ಪಣಕಜೆಯಲ್ಲಿ ನೂತನ ಘಟಕ ರ‍್ಯಾಂಬೊ ಫುಡ್ ಗ್ರೇಡ್ ಆಲೂಮಿನಿಯಂ ಪೋಯಿಲ್ ಕಂಟೈನರ್ ಘಟಕ (ಫುಡ್ ಪಾರ್ಸೆಲ್ ಕಂಟೈನರ್ ) ಅ. 28ರಂದು ಶುಭಾರಂಭಗೊಂಡಿತು.
ಉದ್ಘಾಟನೆಯನ್ನು ಮಾಲಕ ರೆಜಿನಾಲ್ಡ್ ಸಲ್ದಾನ ನೆರವೇರಿಸಿದರು. ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ಅಬೆಲ್ ಲೋಬೊ ಆಶೀರ್ವಾಚನಗೈದು ಶುಭ ಹಾರೈಸಿದರು.
ಮಾಜಿ ತಾ.ಪಂ. ಸದಸ್ಯ ವಿನ್ ಸೆಂಟ್ ಡಿಸೋಜಾ, ಮಾಜಿ ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯ ಜೆರಾಲ್ಡ್ ಕೊರೆಯ, ಡೇನಿಸ್ ಲೋಬೊ, ಸ್ಟಿವನ್ ಮೊಂತೇರೋ, ಎಡ್ವಾರ್ಡ್ ಡಯಾಸ್, ರೋನಾಲ್ಡ್ ಫೆರ್ನಾಂಡಿಸ್, ಸ್ಟಾನಿ, ಅರ್ವಿನ್, ಬ್ಯಾಫ್ಟಿಸ್ಟ್ ಲಸ್ರದೋ, ಪೌಲಿನ್ ಲಸ್ರದೋ, ವಿಯೋಲ್ಲ ಲಸ್ರದೋ, ಮಾಲಕರ ಪೋಷಕರಾದ ರಿಚರ್ಡ್ ಸಲ್ದಾನ, ಗ್ರೇಸಿ ಸಲ್ದಾನ ಮೊದಲಾದವರು ಉಪಸ್ಥಿತರಿದ್ದರು.

