Site icon Suddi Belthangady

ಬಾರ್ಯ: ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಪೂರ್ವಭಾವಿ ಸಭೆ-ಶಾಸಕ ಹರೀಶ್ ಪೂಂಜ ಭಾಗಿ

ಬಾರ್ಯ: ಕೃಷಿ ಪತ್ತಿನ ಸಹಕಾರಿ ಸಂಘ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನ.5 ರಂದು ನಡೆಯಲಿದೆ. ಆ ಪ್ರಯುಕ್ತ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಶಾಸಕ ಹರೀಶ್ ಪೂಂಜರವರು ಭಾಗವಹಿಸಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ 12 ಅಭ್ಯರ್ಥಿ ಅಭ್ಯರ್ಥಿಗಳು ಗೆಲುವಿನ ಬಗ್ಗೆ ವಿವಿಧ ಜವಾಬ್ದಾರಿ ನೀಡಿ ಸಮಾಲೋಚನೆ ನಡೆಸಿದರು.

ಪ್ರಭಾರಿಗಳಾದ ಸುಂದರ ಹೆಗ್ಡೆ ವೇಣೂರು, ತಣ್ಣೀರುಪಂತ ಸಿಎ ಬ್ಯಾಂಕ್ ಅಧ್ಯಕ್ಷ ಜಯಾನಂದ ಕಲ್ಲಾಪು, ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಪ್ರಮುಖರಾದ ಪ್ರಸನ್ನ ಗೌಡ ಪುತ್ತಿಲ, ಪ್ರವೀಣ್ ರೈ, ಪ್ರಶಾಂತ್ ಪೈ, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೆoಕ್ಯಾರ್, ಬಾರ್ಯ ಶಕ್ತಿಕೇಂದ್ರದ ಪ್ರಮುಖರು, ಬೂತ್ ಪ್ರಮುಖರು ಮತ್ತು ಅಭ್ಯರ್ಥಿಗಳು, ಜನಪ್ರತಿನಿದಿನಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version