ಮಡಂತ್ಯಾರು: 23ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯಾನ್ ಶಿಪ್-2025, ನ. 5ರಿಂದ 9ರ ತನಕ ಚೆನ್ನೈಯ ನೆಹರು ಕ್ರೀಡಾಂಗಣದಲ್ಲಿ ಜರಗುವ ಏಷ್ಯಾನ್ ಮಾಸ್ಟರ್ ಕ್ರೀಡಾಕೂಟಕ್ಕೆ ವಲೇರಿಯನ್ ಫ್ರಾಂಕ್ ಮಡಂತ್ಯಾರು ಅವರು ದ.ಕ. ಜಿಲ್ಲೆಯಿಂದ ಆಯ್ಕೆಯಾಗಿರುತ್ತಾರೆ.
ಈ ಕ್ರೀಡಾಕೂಟದಲ್ಲಿ 22 ರಾಷ್ಟ್ರಗಳು ಭಾಗವಹಿಸುತ್ತದೆ. ಇವರು 60+ ವಯೊಮಿತಿಯಲ್ಲಿ 5000m, ಓಟ ಹಾಗೂ 1500m. ಓಟದಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಜರಗಿದ ಕ್ರೀಡಾಕೂಟದಲ್ಲಿ ಭಾಗವಹಿಸಿ ಆಯ್ಕೆಯಾಗಿರುತ್ತಾರೆ. ಅಲ್ಲದೆ ಮಂಗಳೂರು ನಿವೀಸ್ ಮ್ಯಾರಾಥನ್, ಉಡುಪಿ ಮ್ಯಾರಾಥನ್, ಮಣಿಪಾಲ್ ಮ್ಯಾರಾಥಾನ್ ಪುತ್ತೂರ್ ಮ್ಯಾರಾಥನ್‌ಗಳಲ್ಲಿ 5 km. ಓಟದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರು ಸಹಾರಾ ಫ್ರೆಂಡ್ಸ್ ಮಡಂತ್ಯಾರು ಕಬಡ್ಡಿ ತಂಡದ ವ್ಯವಸ್ಥಾಪಕರಾಗಿ 10-15 ವರ್ಷಾ ತಂಡವನ್ನು ಮುನ್ನಡೆಸಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.

