ಉಜಿರೆ: ಕರಿಗಂಧ ಸೇವಾ ಸಂಘದ ಸ್ಥಾಪಕಿ, ಅಧ್ಯಕ್ಷೆ ಸುಜಾತಾ ಕಿರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷವಾಗಿ ಬೆಳ್ತಂಗಡಿ ಅನುಗ್ರಹ ಚಾರಿಟೇಬಲ್ ಟ್ರಸ್ಟ್ ವೃದ್ಧಾಶ್ರಮಕ್ಕೆ ಭೋಜನ ವ್ಯವಸ್ಥೆ, ಸಿಹಿ ತಿಂಡಿ ಹಂಚಿ ಫಲವಸ್ತುಗಳನ್ನು ನೀಡಲಾಯಿತು.
ಅನುಗ್ರಹ ಚಾರಿಟೇಬಲ್ ಟ್ರಸ್ಟ್ ನ ಸಿಬ್ಬಂದಿ ವರ್ಗ ಮತ್ತು ಕಾನೂನು ಸಲಹೆಗಾರರಾದ ಟಿಸ್ಮಿ ಎಸ್.ವಿ. ಹಾಗೂ ಕರಿಗಂಧ ಸೇವಾ ಸಂಘದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.

