Site icon Suddi Belthangady

ಬಾವಿಗೆ ಬಿದ್ದು ಮೃತರಾದ ಬೂಡುಮುಗೇರು ನಿವಾಸಿ ತೇಜಸ್ವಿನಿ ಅವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

ಬೆಳ್ತಂಗಡಿ: ಇತ್ತೀಚೆಗೆ ಬಾವಿಗೆ ಬಿದ್ದು ಮೃತರಾದ ಅರಸಿನಮಕ್ಕಿಯ ಗೋಪಾಲಕೃಷ್ಣ ಅನುದಾನಿತ ಹಿ. ಪ್ರಾ. ಶಾಲೆಯ ಗೌರವ ಶಿಕ್ಷಕಿ ಹತ್ಯಡ್ಕ ಗ್ರಾಮದ ಬೂಡುಮುಗೇರು ನಿವಾಸಿ ತೇಜಸ್ವಿನಿ ಅವರ ಮನೆಗೆ ಶಾಸಕ ಹರೀಶ್ ಪೂಂಜ ಅವರು ಅ.27ರಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಿಜೆಪಿ ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿಗಳಾದ ಗಣೇಶ್ ಹೊಸ್ತೋಟ, ಹತ್ಯಡ್ಕ ಶಕ್ತಿಕೇಂದ್ರ ಪ್ರಮುಖ್ ಜಯಪ್ರಸಾದ್ ಶೆಟ್ಟಿಗಾರ್, ಪಕ್ಷದ ಪ್ರಮುಖರಾದ ವೃಷಾಂಕ್ ಖಾಡಿಲ್ಕರ್, ಗಣೇಶ್ ಪಲಸ್ತಡ್ಕ, ಶ್ರೀಕಾಂತ್ ಕಾಂತ್ರೆಲ್ ಮತ್ತಿತರರಿದ್ದರು.

Exit mobile version