ಗೋವಿಂದೂರು: ಮಾವಿನಕಟ್ಟೆಯ ಪಿಲಿಗೂಡು ಸಮೀಪದ ದಿ. ರಾಬರ್ಟ್ ರೋಡ್ರಿಗಸ್ ರವರ ಪುತ್ರ ಅನಿಲ್ ಪ್ರಕಾಶ್ ರೋಡ್ರಿಗಸ್(29) ಅವರು ಅ.27ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸ್ವಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅನಿಲ್ ಮೃತದೇಹ ಪತ್ತೆಯಾಗಿದೆ. ಅವರು ತನ್ನ ತಾಯಿಯೊಂದಿಗೆ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬೆಳ್ತಂಗಡಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗೋವಿಂದೂರು: ಮಾವಿನಕಟ್ಟೆಯ ಅನಿಲ್ ಪ್ರಕಾಶ್ ರೋಡ್ರಿಗಸ್ ಆತ್ಮಹತ್ಯೆ

