Site icon Suddi Belthangady

ಮಚ್ಚಿನ: ಪಾರ್ಶ್ವನಾಥ ಸ್ವಾಮಿ ಬಸದಿಗೆ ಸರ್ಕಾರದಿಂದ 1 ಕೋಟಿ ಅನುದಾನ ಮಂಜೂರು- ರಕ್ಷಿತ್ ಶಿವರಾಂಗೆ ಅಭಿನಂದನೆ

ಬೆಳ್ತಂಗಡಿ: ತಾಲೂಕಿನ ಮಚ್ಚಿನ ಭಗವಾನ್‌ ಶ್ರೀ ೧೦೦೮ ಪಾರ್ಶ್ವನಾಥ ಬಸದಿಯ ಅಭಿವೃದ್ಧಿಗೆ ಸರಕಾರದಿಂದ 1 ಕೋಟಿ ಅನುದಾನ ಮಂಜುರಾಗಿದ್ದು. ಅನುದಾನ ಮಂಜುರಾತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರಿಗೆ ಬಸದಿಯ ಆಡಳಿತ ಮಂಡಳಿಯವರು ಬಸದಿಯಲ್ಲಿ ಅ.27ರಂದು ಅಭಿನಂದನೆಯನ್ನು ಸಲ್ಲಿಸಿದರು.

ಬಸದಿಯ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಕುಮಾರ್ ಜೈನ್, ಗ್ರಾಮ ಪಂಚಾಯತ್ ಸದಸ್ಯ ಪ್ರಮೋದ್ ಕುಮಾರ್, ಆಡಳಿತ ಸಮಿತಿಯ ಉಪಾಧ್ಯಕ್ಷ ಬಾಲಚಂದ್ರ ಹೆಗ್ಗಡೆ, ಕೋಶಾಧಿಕಾರಿ ರಾಜವೀರ ಇಂದ್ರ, ಕಾರ್ಯದರ್ಶಿ ಪಾರ್ಶ್ವನಾಥ, ಪ್ರಮುಖರಾದ ಸುಧೀರ್ ಶೆಟ್ಟಿ, ನಾರಾಯಣ ಪೂಜಾರಿ ಮಚ್ಚಿನ, ಆಡಳಿತ ಸಮಿತಿಯ ಪ್ರಮುಖರಾದ ವಿಜಯಕುಮಾರ್, ಪ್ರಮೀತ್ ಮಡಂತ್ಯಾರು, ಜಿನೇಂದ್ರ ಮಾಯಿಲೋಡಿ ಯುವರಾಜ್ ಜೈನ್ ಮಯಿಲೋಡಿ, ಉದಯಕುಮಾರ್ ಮಡಂತ್ಯಾರ್, ಪ್ರಮೀಳಾ ಜೈನ್, ಜಯಶ್ರೀ ಇಂದ್ರ, ಹಾಗೂ ಸದಾಶಿವ ಹೆಗಡೆ ಬಳ್ಳಮಂಜ ಉಪಸ್ಥಿತರಿದ್ದರು.

Exit mobile version