Site icon Suddi Belthangady

ನ. 2: ಸುಳ್ಯದಲ್ಲಿ “ವ್ಯಾಸ” ಚಲನಚಿತ್ರಕ್ಕೆ ಕಲಾವಿದರ ಆಡಿಶನ್ ಪ್ರಕ್ರಿಯೆ

ಬೆಳ್ತಂಗಡಿ: ಮಾನ್ಯ ಫಿಲಂಸ್ ನಿರ್ಮಾಣದಲ್ಲಿ ಅರೆಭಾಸೆ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರೀಕರಣಗೊಳ್ಳಲಿರುವ ಚಲನ ಚಿತ್ರ ” ವ್ಯಾಸ ” ಇದಕ್ಕೆ ಕಲಾವಿದರ ಆಡಿಶನ್ ಪ್ರಕ್ರಿಯೆ ನ. 2ರಂದು ಸುಳ್ಯದ ಶಿವಕೃಪಾ ಕಲಾಮಂದಿರಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5:30 ರ ವರೆಗೆ ನಡೆಯಲಿದೆ.

ಸಿನಿಮಾ ನಟನೆಯಲ್ಲಿ ಆಸಕ್ತಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಚಿತ್ರತಂಡ ಕೇಳಿಕೊಂಡಿದೆ.

ವಯೋಮಿತಿ: ಬಾಲಕ ಬಾಲಕಿಯರಿಗೆ 10 ರಿಂದ 16 ವರ್ಷ. ಮಹಿಳಾ ಕಲಾವಿದರು 25 ರಿಂದ 55 ವರ್ಷ. ಪುರುಷ ಕಲಾವಿದರು 25 ರಿಂದ 65 ವರುಷ. ಕಲಾವಿದರು ಅರೆಭಾಸೆ ಅಥವಾ ಕನ್ನಡ ಬಲ್ಲವರಾಗಿರಬೇಕು. ಇತ್ತೀಚಿನ ಭಾವಚಿತ್ರದೊಂದಿಗೆ ಆಡಿಶನ್ ನಲ್ಲಿ ಭಾಗವಹಿಸತಕ್ಕದ್ದು.

ಸಹಾಯಕ ನಿರ್ದೇಶನ ಆಸಕ್ತಿ ಇರುವವರು ಭಾಗವಹಿಸಬಹುದು. ಹೆಚ್ವಿನ ಮಾಹಿತಿಗೆ ಸಂಪರ್ಕಿಸಿ : 8217337667, 8088975452

Exit mobile version