ಬೆಳ್ತಂಗಡಿ: ಜೆಸಿಐ ಭಾರತದ ವಲಯ 15ರ ವಲಯ ಸಮ್ಮೇಳನ ಕಹಳೆ-2025 ಮಂಗಳೂರಿನ ಸ್ವಸ್ತಿಕ ವಾಟರ್ ಫ್ರಂಟ್ ಇಲ್ಲಿ ನಡೆಯಿತು. ಜೆಸಿಐ ಬೆಳ್ತಂಗಡಿಯ ಕಾರ್ಯಕ್ರಮಗಳನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ಲಭಿಸಿರುತ್ತದೆ, ಸಮುದಾಯದ ಅಭಿವೃದ್ಧಿ, ತರಬೇತಿ ವಿಭಾಗದ ಕಾರ್ಯಕ್ರಮಗಳು, ವ್ಯವಹಾರ ವಿಭಾಗದ ಕಾರ್ಯಕ್ರಮಗಳು, ಅಭಿವೃದ್ಧಿ ಹಾಗೂ ಬೆಳವಣಿಗೆ ವಿಭಾಗದ ಕಾರ್ಯಕ್ರಮಗಳನ್ನು ಪರಿಗಣಿಸಿ ವಲಯದ ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿ ಹಾಗೂ ಜೇಸಿ ಸಪ್ತಾಹದ ವಿಶೇಷವಾಗಿ ಆಯೋಜನೆ ಮಾಡಿರುವುದಕ್ಕಾಗಿ ವಲಯದ ಅತ್ಯುತ್ತಮ ಜೆಸಿ ಸಪ್ತಾಹ ರನ್ನರ್ ಪ್ರಶಸ್ತಿ ಜೆಸಿಐ ಬೆಳ್ತಂಗಡಿ ತನ್ನ ಮುಡಿಗೇರಿಸಿಕೊಂಡಿದೆ. ಅದಲ್ಲದೆ ಬೇರೆ ಬೇರೆ ವಿಭಾಗಗಳಲ್ಲಿ ನಡೆದ ಕಾರ್ಯಕ್ರಮಗಳಿಗೆ ಒಟ್ಟು 15 ಮನ್ನಣೆಗಳು ಜೆಸಿಐ ಬೆಳ್ತಂಗಡಿಗೆ ಒದಗಿ ಬಂದಿದೆ.
ಜೆಸಿಐ ಬೆಳ್ತಂಗಡಿಯ ಸದಸ್ಯ ಅನುದೀಪ್ ಜೈನ್ ಅವರು ಅತ್ಯುತ್ತಮ ಸದಸ್ಯ ವಿನ್ನರ್ ಪ್ರಶಸ್ತಿ ಪಡೆದರೆ ಈ ವರ್ಷದ ನೂತನ ಸದಸ್ಯೆ ಭವ್ಯಶ್ರೀ ಕೀರ್ತಿರಾಜ್ ಅವರು ಅತ್ಯುತ್ತಮ ನೂತನ ಮಹಿಳಾ ಸದಸ್ಯೆ ರನ್ನರ್ ಪ್ರಶಸ್ತಿ ಪಡೆದಿರುತ್ತಾರೆ. ಜೆಸಿಐ ಭಾರತದ ವಲಯ 15ರ ವಲಯ್ಯಾಧ್ಯಕ್ಷ ಜೆಸಿಐ ಸೆನೇಟರ್ ಅಭಿಲಾಶ್ ಬಿ.ಎ. ಅವರು ಈ ಪ್ರಶಸ್ತಿಗಳನ್ನು ಘಟಕ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಹಾಗೂ ತಂಡಕ್ಕೆ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಪ್ರಾಂತ್ಯ ‘ಡಿ’ಯ ವಲಯ ಉಪಾಧ್ಯಕ್ಷ ರಂಜಿತ್ ಎಚ್.ಡಿ. ಇತರ ಪ್ರಾಂತ್ಯದ ಉಪಾಧ್ಯಕ್ಷರು, ಪೂರ್ವ ವಲಯ್ಯಾಧ್ಯಕ್ಷರು ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ಸುಮಾರು 60 ಘಟಕಗಳ ಅಧ್ಯಕ್ಷರು ಸಾವಿರಕ್ಕೂ ಹೆಚ್ಚು ಜೆಸಿಐನ ಸದಸ್ಯರು ಉಪಸ್ಥಿತರಿದ್ದರು.
ಎರಡು ದಿನದ ಈ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿಯ ಘಟಕ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಜೊತೆಯಲ್ಲಿ ಕಾರ್ಯದರ್ಶಿ ಪ್ರಮೋದ್ ಕೆ., ಕೋಶಾಧಿಕಾರಿ ರಕ್ಷಿತ್ ಅಂಡಿಂಜೆ ಸದಸ್ಯರಾದ ರಾಘವೇಂದ್ರ ಪೂಜಾರಿ, ರಮ್ಯಾ ಗೌಡ ಉಜಿರೆ, ಶೈಲೇಷ್ ಕೆ., ಅನುದೀಪ್ ಜೈನ್, ಭವ್ಯಶ್ರೀ ಕೀರ್ತಿರಾಜ್, ಸುದೀಪ್ ಸಾಲ್ಯಾನ್ ಪೂರ್ವ ಅಧ್ಯಕ್ಷರಾದ ವಸಂತ್ ಶೆಟ್ಟಿ ಶ್ರದ್ಧಾ, ಚಿದಾನಂದ ಇಡ್ಯಾ, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಲಾೖಲ, ಶಂಕರ ರಾವ್ ವಲಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ.

