ಕೊಕ್ಕಡ: ವಿಶ್ವ ಹಿಂದೂ ಪರಿಷದ್ ಕೊಕ್ಕಡ ಘಟಕ ಹಾಗೂ ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ ಇವರ ಸಹಯೋಗದಲ್ಲಿ 69ನೇ ವರುಷದ ಸಾರ್ವಜನಿಕ ನಗರ ಭಜನಾ ಸಪ್ತಾಹ ಅ.28ರಿಂದ ನ.03ರವರೆಗೆ ಭಕ್ತಿಭಾವದಿಂದ ನಡೆಯಲಿದೆ.
ಅ.28ರಂದು ಸಂಜೆ 7.00 ಗಂಟೆಗೆ ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ರಂಗಪೂಜೆ ನೆರವೇರಲಿದೆ. ಅ.29ರಂದು ಮಧ್ಯಾಹ್ನ 1.00 ಗಂಟೆಗೆ ಕೊಕ್ಕಡದಿಂದ ಹೊರಟು ದೇವರ ಮೂರ್ತಿಯನ್ನು ಶಿಶಿಲ ಬರ್ಗುಳದ ದಿ.ಪುರುಷೋತ್ತಮ ನಾಯಕ್ ಅವರ ಮನೆಯಿಂದ ಕೊಕ್ಕಡಕ್ಕೆ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ.
ಸಂಜೆ 6.30ಕ್ಕೆ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರ ಪ್ರಾರ್ಥನೆಯೊಂದಿಗೆ ಭಜನೆ ಆರಂಭಗೊಂಡು ನ.01ರ ತನಕ ಪ್ರತಿದಿನ ಕೊಕ್ಕಡ ಶ್ರೀರಾಮ ಭಜನಾ ಮಂದಿರದಲ್ಲಿ ಪ್ರಾರಂಭಗೊಂಡು ನಗರ ಸಂಚಾರದಿಂದ ಮುಕ್ತಾಯಗೊಳ್ಳಲಿದೆ.
ನಗರ ಭಜನಾ ಮಹೋತ್ಸವದ ಶೋಭಾಯಾತ್ರೆ ನ.2ರಂದು ಸಂಜೆ 6 ಗಂಟೆಗೆ ಆರಂಭಗೊಂಡು ಮರುದಿನ ಬೆಳಗ್ಗೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.
ನ.2ರಂದು ಭಜನಾ ಸಪ್ತಾಹದ ವಿಶೇಷ ಆಕರ್ಷಣೆಯಾಗಿ ಸ್ಥಳೀಯ ಹಾಗೂ ಆಹ್ವಾನಿತ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ. ಕೊಕ್ಕಡ ಕೇಸರಿ ಗೆಳೆಯರ ಬಳಗದ ಪ್ರಾಯೋಜಕತ್ವದಲ್ಲಿ ಆಹ್ವಾನಿತ ಕುಣಿತ ಭಜನಾ ತಂಡಗಳು ಶ್ರೀ ದುರ್ಗಾ ಭಜನಾ ಮಂಡಳಿ ಕನ್ನಾಜೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಂದ್ಕೂರು ಅವರಿಂದ ಭಕ್ತಿ ಸ್ಫೂರ್ತಿ ತುಂಬಿದ ಕುಣಿತ ಭಜನೆ ಪ್ರದರ್ಶನಗಳು ನಡೆಯಲಿವೆ. ಪ್ರತಿದಿನ ರಾತ್ರಿ 7.30ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಲಿದೆ.
ಈ ಕುರಿತು 69ನೇ ವರುಷದ ಭಜನಾ ಮಹೋತ್ಸವ ಸಮಿತಿ ಅಧ್ಯಕ್ಷ ದೀಕ್ಷಿತ್ ಕೊಕ್ಕಡ, ಕಾರ್ಯದರ್ಶಿ ಗಣೇಶ್ ಕೆ. ದೇವಾಡಿಗ, ಕೋಶಾಧಿಕಾರಿ ಮಹೇಶ್ ಕೊಕ್ಕಡ ಹಾಗೂ ಸರ್ವ ಸದಸ್ಯರು, ಕೊಕ್ಕಡ ಶ್ರೀರಾಮ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ನೈಮಿಷ ಸೌತಡ್ಕ ಹಾಗೂ ಸರ್ವ ಸದಸ್ಯರು, ಜೊತೆಗೆ ಕೊಕ್ಕಡ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಪುರುಷೋತ್ತಮ ಕೆ. ಹಾಗೂ ಕಾರ್ಯದರ್ಶಿ ಶಶಿ ಕೊಕ್ಕಡ ಕಾರ್ಯಕ್ರಮದ ವಿವರಗಳನ್ನು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

