Site icon Suddi Belthangady

ಧರ್ಮಸ್ಥಳ: ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕ ಟ್ರಸ್ಟ್ ನಿಂದ ಹೆಗ್ಗಡೆಯವರಿಗೆ ಅಭಿನಂದನಾ ಸ್ಮರಣಿಕೆ

ಧರ್ಮಸ್ಥಳ: ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ 58ನೇ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಕಾರ್ಯಕ್ರಮವು ಅ.24ರಂದು ಶ್ರೀ ಕ್ಷೇತ್ರದಲ್ಲಿ ಜರಗಿದ್ದು, ಶ್ರೀ ಕ್ಷೇತ್ರದ ಸಂಸ್ಥೆಗೆ ಒಳಪಟ್ಟ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಮುಖ್ಯ ವೈದ್ಯಾಧಿಕಾರಿ ಡಾ| ಗೋಪಾಲ್ ಪೂಜಾರಿ, ಸ್ಥಾನಿಕ ವೈದ್ಯಾಧಿಕಾರಿಯವ ಡಾ| ಶೋಭಿತ್ ಶೆಟ್ಟಿ ಹಾಗೂ ವ್ಯವಸ್ಥಾಪಕ ಪ್ರವೀಣ್ ಕುಮಾರ್‌ ಅವರು ಹೆಗ್ಗಡೆಯವರನ್ನು ಅವರ ಬೀಡು ನಿವಾಸದಲ್ಲಿ ಅ.24ರಂದು ಪರೀಕ ಶ್ರೀ ಶ್ರೀನಿವಾಸ ದೇವರ ಪ್ರಸಾದವನ್ನು ಪುರೋಹಿತ ಗುರುಪ್ರಸಾದ್ ಭಟ್ ಅವರ ಮೂಲಕ ನೀಡಿ ‘ಪ್ರಾತಃಸ್ಮರಣೀಯರಿಗೆ ಪದಗಳಾರತಿ’ ಎಂಬ ಅಭಿನಂದನಾ ಸ್ಮರಣಿಕೆಯನ್ನು ಸಮರ್ಪಿಸಿ ಗೌರವ ವಂದನೆ ಸಲ್ಲಿಸಿದರು. ಹೆಗ್ಗಡೆಯವರು ತನ್ಮೂಲಕ ಸೌಖ್ಯವನ ಸಂಸ್ಥೆಯ ಎಲ್ಲಾ ವೈದ್ಯಾಧಿಕಾರಿ, ಆಡಳಿತ ವರ್ಗ ಮತ್ತು ಸಿಬ್ಬಂದಿಗಳಿಗೆ ತನ್ನ ಆಶೀರ್ವಾದವನ್ನು ನೀಡಿ ಹರಸಿದರು.

Exit mobile version