Site icon Suddi Belthangady

ವೇಣೂರು: ಪ್ರಾ.ಕೃ.ಪ.ಸ. ಸಂಘದ ಕಟ್ಟಡ “ಫಲ್ಗುಣಿ” ಉದ್ಘಾಟನೆ

ವೇಣೂರು: ಪ್ರಾಥಮಿಕ ಕೃಷಿ ಪತ್ತಿನ ನೂತನ ಕಟ್ಟಡ ಫಲ್ಗುಣಿ ಇದರ ಉದ್ಘಾಟನಾ ಸಮಾರಂಭ ಅ. 25ರಂದು ನಡೆಯಿತು. ನೂತನ ಕಟ್ಟಡವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಂದರ ಹೆಗ್ಡೆ B.E. ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭದ್ರಾತಾ ಕೊಠಟಿ ಉದ್ಘಾಟಿಸಿದರು, ಗೋದಾಮ ಮಂಗಳೂರು ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಕೆ. ಹರೀಶ್ ಕುಮಾರ್ ಉದ್ಘಾಟಿಸಿದರು.

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿ ಕುಮಾರ್ ಬಾಲ್ಯೊಟ್ಟು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಪಿ. ಕುಶಾಲಪ್ಪ ಗೌಡ, ಮಂಗಳೂರು ಕೆ.ಎಂ.ಎಫ್.ನಿರ್ದೇಶಕ ಪ್ರಭಾಕರ ಹುಲಿಮೇರು, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ ಸಮಿತಿ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್, ವೇಣೂರು ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ವೇಣೂರು ಎಂ.ಜೆ.ಎಂ ಖತೀಬರು ಸಯ್ಯದ್ ಮುಹಮ್ಮದ್ ಶರಪುದ್ದೀನ್ ಅಪ್ಸನಿ ಅಲ್‌ಹಾದಿ ತಂಬಳ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ರತ್ನಾಕರ ಬಿ. ನಿರ್ದೇಶಕರಾದ ರಾಮದಾಸ್ ನಾಯಕ್, ಸಂದೀಪ್ ಹೆಗ್ಡೆ, ಪ್ರಶಾಂತ್, ನಾಗಪ್ಪ, ರಾಜು ನಾಯ್ಕ, ಪ್ರವೀಣ್, ಎಂ. ಆರ್. ಸಂತೋಷ್, ಕೃಷ್ಣಪ್ಪ ಮೂಲ್ಯ, ಆಶಾ, ರೋಹಿಣಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದಿನ್, ಸಿಬ್ಬಂದಿ ವರ್ಗ ದವರು ಹಾಜರಿದ್ದು ಸಹಕರಿಸಿದರು.

ತಾಲೂಕಿನ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಮಾಜಿ ಅಧ್ಯಕ್ಷರು, ಮಾಜಿ ನಿರ್ದೇಶಕರು, ಸಹಕಾರಿ ಬಂಧುಗಳು, ಸಂಘದ ಸದಸ್ಯರು, ಊರ ನಾಗರಿಕರು ಉಪಸ್ಥಿತರಿದ್ದರು.
ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Exit mobile version