Site icon Suddi Belthangady

ನ.9‌: ಮುಕ್ಕೂರಿನಲ್ಲಿ ಸಿಂಗಲ್ ಗ್ರಿಪ್ ಮತ್ತು ಲೆವಲ್ ಮಾದರಿಯ ಹಗ್ಗಜಗ್ಗಾಟ ಮತ್ತು ಗ್ರಾಮ‌-ಗ್ರಾಮಗಳ ತಂಡದ ನಡುವಿನ‌ ವಾಲಿಬಾಲ್ ಪಂದ್ಯಾಟ

ಬೆಳ್ಳಾರೆ: ನೇಸರ ಯುವಕ ಮಂಡಲ ಮುಕ್ಕೂರು ಇದರ ದಶಮಾನೋತ್ಸವದ ಪ್ರಯುಕ್ತ ಪುರುಷರ ವಿಭಾಗದ ಸಿಂಗಲ್ ಗ್ರಿಪ್ ಮತ್ತು ಲೆವಲ್ ಮಾದರಿಯ ಹಗ್ಗಜಗ್ಗಾಟ ಹಾಗೂ ಗ್ರಾಮ‌ ಗ್ರಾಮಗಳ ತಂಡದ ನಡುವಿನ‌ ವಾಲಿಬಾಲ್ ಪಂದ್ಯಾಟವು ನ.9ರಂದು ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಮುಕ್ಕೂರು ಶಾಲಾ ವಠಾರದಲ್ಲಿ ಜರುಗಲಿದೆ.

ಪುರುಷರ 535+5 ಕೆ.ಜಿ ವಿಭಾಗದ 8 ಜನರ ಲೆವೆಲ್ ಮತ್ತು ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಇದಾಗಿದೆ. ಎರಡೂ ವಿಭಾಗದಲ್ಲಿ ಪ್ರಥಮ ಬಹುಮಾನ‌ವಾಗಿ ತಲಾ 5001, ದ್ವಿತೀಯ ಬಹುಮಾನ‌ 3001, ತೃತೀಯ ಬಹುಮಾನ‌ 2001, ಚತುರ್ಥ ಬಹುಮಾನ 1001 ಹಾಗೂ ನೇಸರ ದಶಪ್ರಣತಿ ಟ್ರೋಫಿ ದೊರೆಯಲಿದೆ. ಪ್ರವೇಶ ಶುಲ್ಕ : 550 ರೂ. ನಿಗದಿಪಡಿಸಲಾಗಿದ್ದು ಕರ್ನಾಟಕ ರಾಜ್ಯಕ್ಕೆ ಒಳಪಟ್ಟ ತಂಡಗಳಿಗೆ ಮುಕ್ತ ಪ್ರವೇಶವಿದೆ.

ಪುರುಷರ ವಿಭಾಗದ ಗ್ರಾಮ ಗ್ರಾಮಗಳ ತಂಡಗಳ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನ‌ವಾಗಿ 5001, ದ್ವಿತೀಯ ಬಹುಮಾನ‌ 3001, ತೃತೀಯ ಮತ್ತು ಚತುರ್ಥ ಬಹುಮಾನವಾಗಿ ನೇಸರ ದಶಪ್ರಣತಿ ಟ್ರೋಫಿ ದೊರೆಯಲಿದೆ. ಪ್ರವೇಶ ಶುಲ್ಕ 550 ರೂ. ನಿಗದಿಪಡಿಸಲಾಗಿದೆ. ಆಯಾ ತಂಡದಲ್ಲಿ ಆಡುವ ಸದಸ್ಯರುಗಳು ಒಂದೇ ಗ್ರಾಮದ ನಿವಾಸಿಗಳಾಗಿರಬೇಕು. ಗ್ರಾಮದ‌ ನಿವಾಸಿ ಎನ್ನುವ ದೃಢೀಕರಣಕ್ಕೆ ಪ್ರತಿ ಆಟಗಾರನ ಬಳಿ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 9740189529, 9741160813, 83106 09746, 8618458207, 88617 39358.

Exit mobile version