Site icon Suddi Belthangady

ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ಅಂಗವಾಗಿ ಉಜಿರೆ ಎಸ್‌.ಡಿ.ಎಂ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಸರಣಿ ಕಾರ್ಯಕ್ರಮಗಳು

ಉಜಿರೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ಸಂಭ್ರಮದ ಅಂಗವಾಗಿ ಎಸ್‌.ಡಿ.ಎಂ ಇಂಜಿನಿಯರಿಂಗ್‌ ಕಾಲೇಜಿನಲ್ಲಿ, ವಿದ್ಯಾರ್ಥಿಗಳಲ್ಲಿ ಆರೋಗ್ಯ, ಸಾಮಾಜಿಕ ಜಾಗೃತಿ ಮತ್ತು ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಅ. 15ರಂದು  ಉಜಿರೆ ಎಸ್‌.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಹಾರ ತಜ್ಞೆ ಅನ್ವೇಷಾ ಜೈನ್ ಅವರು ಆರೋಗ್ಯ ಮತ್ತು ಶುಚಿತ್ವ ಕುರಿತು ಉಪನ್ಯಾಸ ನೀಡಿದರು.

ಅ. 16ರಂದು ಯೂತ್ ರೆಡ್ ಕ್ರಾಸ್ ಘಟಕ ಹಾಗೂ ಎಸ್‌.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ,  ಸಹಕಾರದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಯಿತು. ಎಸ್‌.ಡಿ.ಎಂ ಆಸ್ಪತ್ರೆಯ ಪೆಥಲಾಜಿಸ್ಟ್ ಡಾ. ಮೇಘಾ ನಾಯಕ್ ಶಿಬಿರವನ್ನು ಉದ್ಘಾಟಿಸಿದರು. ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಒಟ್ಟು 170 ಯೂನಿಟ್ ರಕ್ತದಾನ ಮಾಡಿದರು.

ಅ. 17ರಂದು ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗವು (EEE) ʼಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳುʼ ಎಂಬ ವಿಷಯದ ಬಗ್ಗೆ ಕಾರ್ಯಕ್ರಮವನ್ನು ಆಯೋಜಿಸಿತು. ಒಎನ್‌ಜಿಸಿ (ONGC)ಯ, ನಿವೃತ್ತ ಮಹಾಪ್ರಬಂಧಕ ಸುಬ್ರಹ್ಮಣ್ಯ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಯ ಕುರಿತು ʼಮೈಮ್ ಶೋʼ ಆಯೋಜಿಸಲಾಯಿತು.

Exit mobile version