Site icon Suddi Belthangady

ಮಹಾಗಣಪತಿ ಹೆಸರಿನ ಶಾಲೆಯಲ್ಲಿ ರಾಜಕೀಯ ಸೇರಿಸಬೇಡಿ: ಡಾ. ಪ್ರಭಾಕರ್ ಭಟ್ ಕಲ್ಲಡ್ಕ-ಸೌತಡ್ಕ ದೇಗುಲ ಆಡಳಿತ ಸಮಿತಿಗೆ ಕುಟುಕಿದ ಕಲ್ಲಡ್ಕ ಭಟ್

ಕೊಕ್ಕಡ: ಹಿಂದುತ್ವ ಉಳಿಸುವ ನಿಟ್ಟಿನಲ್ಲಿ ಕೊಕ್ಕಡ ದಲ್ಲಿ ಮಹಾಗಣಪತಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಪ್ರಾರಂಭ ಮಾಡುತ್ತಿದ್ದೇವೆ. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬನ್ನಿ ಎಂದು ಸೌತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರನ್ನು ಕರೆದಾಗ ಅವರಿಗೆ ಶಾಲೆಗೆ ಮಹಾಗಣಪತಿ ಹೆಸರು ಇಟ್ಟಿರುವ ಬಗ್ಗೆ ಅಸಮಾಧಾನ ಉಂಟಾಗಿದೆ. ಗಣಪತಿ ಹೆಸರು ಇಟ್ಟಿರುವುದಕ್ಕೆ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ. ಆದರೆ ನಾವು ಈ ಶಾಲೆಯನ್ನು ಮಹಾಗಣಪತಿ ಹೆಸರಲ್ಲೇ ಪ್ರಾರಂಭ ಮಾಡುವುದು. ಅದನ್ನು ಯಾರೂ ತಡೆಯಲು ಸಾಧ್ಯ ಇಲ್ಲ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ್ ಭಟ್ ಸ್ಪಷ್ಟಪಡಿಸಿದ್ದಾರೆ.

ಕೊಕ್ಕಡದಲ್ಲಿ ಉದ್ದೇಶಿತ ಶ್ರೀ ಮಹಾಗಣಪತಿ ಇಂಗ್ಲೀಷ್ ಮಾಧ್ಯಮ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯಿಂದ ಮಕ್ಕಳು ಸೌತಡ್ಕ ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಬರುತ್ತಾರೆ. ಆಡಳಿತ ಸಮಿತಿಯವರ ಮಕ್ಕಳು ಬಂದರೂ ಅವರಿಗೆ ಅದೇ ಸಂಸ್ಕೃತಿ ಹೇಳಿಕೊಡುತ್ತೇವೆ. ಸಮಿತಿ ಅಧಿಕಾರದ ಅವಧಿ ಎಷ್ಟು 3 ವರ್ಷ ಅಲ್ವಾ.. ಆಮೇಲೆ ಏನು ಮಾಡ್ತಾರೆ ಅವರು? ಸುಮ್ಮನೆ ಶಾಲೆ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಕೋರ್ಟಿಗೆ ಹೋಗ್ತೇವೆ ಅಂತ ಹೇಳುತ್ತಿದ್ದಾರೆ. ಹೋಗಲಿ, ಜಡ್ಜ್ ಗಳು ಇವರನ್ನು ನೋಡಿ ನಿಮಗೆ ಹುಚ್ಚಾ ಎಂದು ಕೇಳುತ್ತಾರೆ ಅಷ್ಟೇ ಎಂದು ಸೌತಡ್ಕ ದೇಗುಲದ ಆಡಳಿತ ಸಮತಿಯವರಿಗೆ ಕುಟುಕಿದರು.

Exit mobile version