Site icon Suddi Belthangady

ಬೆಳಾಲು: ಮಾಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 43ನೇ ವರ್ಷದ ಕ್ರೀಡಾಕೂಟ- ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಸಾಧಕರಿಗೆ ಗೌರವ

ಬೆಳಾಲು: ಮಾಯ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ಆಶ್ರಯದಲ್ಲಿ ಪ್ರತಿ ವರ್ಷದಂತೆ ದೀಪಾವಳಿ ಹಬ್ಬದ ಪ್ರಯುಕ್ತ 43ನೇ ವರ್ಷದ ಕ್ರೀಡಾ ಕೂಟ ಅ. 23ರಂದು ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಬೆಳಿಗ್ಗೆ ಕ್ರೀಡಾಕೂಟವನ್ನು ದೇವಸ್ಥಾನದ ಅರ್ಚಕ ಕೇಶವ ರಾಮಯಾಜಿ ಉದ್ಘಾಟಿಸಿದರು. ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀನಿವಾಸ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಗೌಡ, ಎಳ್ಳುಗದ್ದೆ, ಕೃಷ್ಣಯ್ಯ ಆಚಾರ್ಯ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಬೆಳ್ತಂಗಡಿ ವಾಣಿ ಪ. ಪೂ. ಕಾಲೇಜು ಉಪನ್ಯಾಸಕ ದಿನೇಶ್ ಗೌಡ ಉರೆಜ್ಜ, ಎಸ್ ಕೆ ಡಿ ಆರ್ ಪಿ ಉಜಿರೆ ವಲಯ ಮೇಲ್ವಿಚಾರಕಿ ಪೂರ್ಣಿಮಾ, ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯರಾಮ ಮಯ್ಯ, ಮಾಯ ಸ. ಉ. ಪ್ರಾ ಶಾಲಾ ಸಹ ಶಿಕ್ಷಕಿ ಜ್ಯೋತಿ ಎಂ. ಎಸ್., ಅನಂತೋಡಿ ಶ್ರೀ ಅನಂತೇಶ್ವರ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಪೋಸೊಟ್ಟು, ಮಾಯ ಮಹೇಶ್ವರ ಭಜನಾ ಮಂಡಳಿಯ ಗೌರವಾಧ್ಯಕ್ಷ ಕೃಷ್ಣಪ್ಪ ಗೌಡ ಬೆರ್ಕೆಜಾಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಜನಾ ಮಂಡಳಿ ಕಾರ್ಯದರ್ಶಿ ಶಿವಪ್ರಸಾದ್ ಸ್ವಾಗತಿಸಿ, ಗೋಪಾಲ ಗೌಡ ಉರೆಜ್ಜ ನಿರೂಪಿಸಿದರು. ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಮಾಯ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್. ಪದ್ಮ ಗೌಡ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುರೇಂದ್ರ ಗೌಡ ಸುರುಳಿ, ಪ್ರೇಮಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಮಾಯ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಸುಲೋಚನಾ ಭಾಗವಹಿಸಿ ಬಹುಮಾನ ವಿತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ ಕುದ್ರಾಲು ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕ ಶಿವಕುಮಾರ್ ಬಾರಿತ್ತಾಯ ಪಾರಾಳ, ಮಾಯ ಫೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ಜಾರಪ್ಪ ಪೂಜಾರಿ ಬೆಳಾಲು, ಶೈಕ್ಷಣಿಕ ಸಾಧಕರಾದ ಇಂದುಮತಿ ಮಾರ್ಪಲು, ಸುಜ್ಞಾನ್ಯ ಅವರನ್ನು ಸನ್ಮಾನಿಸಲಾಯಿತು. ಬೆಳಾಲು ಗ್ರಾಮದಲ್ಲಿ ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿಯಲ್ಲಿ 2024-25ನೇ ಸಾಲಿನಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಾದ ಮನಸ್ವಿನಿ, ಸಮೀಕ್ಷಾ, ಚೇತನ್ ಎಸ್., ಲಿಖಿತಾ, ಇಂದುಮತಿ, ವೈಷ್ಣವಿ, ಚೈತ್ರ ಪೂರ್ಣಿಮಾ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ತೀರ್ಪುಗಾರರಾದ ಧರ್ಮೇ0ದ್ರ ಕುಮಾರ್, ರವಿಚಂದ್ರ ಜೈನ್, ಶಶಿಧರ ಒಡಿಪ್ರೊಟ್ಟು, ಮೋಹನ ಗೌಡ ಪಿ.ಮಾಚಾರು, ಸಹಕರಿಸಿದ ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು ಮತ್ತು ಇತರನ್ನು ಗೌರವಿಸಲಾಯಿತು. ಭಜನಾ ಮಂಡಳಿಯ ಕಾರ್ಯದರ್ಶಿ ಶಿವಪ್ರಸಾದ್ ಕಪ್ಪೆಹಳ್ಳ ಸ್ವಾಗತಿಸಿ ವಿಜೇತರ ವಿವರ ನೀಡಿದರು.

ಭಜನಾ ಮಂಡಳಿ ಕೋಶಾಧಿಕಾರಿ ಗಣೇಶ್ ಕನಿಕ್ಕಿಲ, ಭಜನಾ ಸಂಚಾಲಕಿ ಭವಾನಿ ಮಾರ್ಪಲು, ಮಹಿಳಾ ಸಂಚಾಲಕಿ ಸುಜಾತಾ ಮಂಜುಶ್ರೀ, ಕ್ರೀಡಾ ಸಂಚಾಲಕ ಶಿಲ್ಪಿ ಶಶಿಧರ ಆಚಾರ್ಯ, ಸಹ ಸಂಚಾಲಕ ರಂಜನ್ ಹೊಸಮನೆ, ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಸಹಕರಿಸಿದರು. ವೃಷ್ಟಿ ಕಿನ್ಯಾಜೆ ಪ್ರಾರ್ಥಸಿದರು. ಶಿಕ್ಷಕ ಮಹೇಶ್ ಪುಳಿತ್ತಡಿ ನಿರೂಪಿಸಿ, ಕವನ ಹಿಮರಡ್ಡ ವಂದಿಸಿದರು.

Exit mobile version