Site icon Suddi Belthangady

ಪಟ್ರಮೆ: ಎಸ್.ವಿ.ಟಿ ಸ್ಪೋರ್ಟ್ಸ್ ಕ್ಲಬ್ ನಿಂದ ದೀಪಾವಳಿ ಪ್ರಯುಕ್ತ 3ನೇ ವರ್ಷದ ವಾಲಿಬಾಲ್ ಪಂದ್ಯಾಟ

ಪಟ್ರಮೆ: ಎಸ್.ವಿ.ಟಿ ಸ್ಪೋರ್ಟ್ಸ್ ಕ್ಲಬ್ ದೀಪಾವಳಿ ಪ್ರಯುಕ್ತ 3ನೇ ವರ್ಷದ ವಾಲಿಬಾಲ್ ಪಂದ್ಯಾಟ ಮಹಾವಿಷ್ಣುಮೂರ್ತಿ ದೇವಸ್ಥಾನದ ಮೈದಾನದಲ್ಲಿ ಅ. 23ರಂದು ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ರೋಹಿತ್ ಕುಮಾರ್ ಪಚ್ಚೆ ಹಾಗೂ ಭಾಸ್ಕರ್ ಕೊಕ್ಕಡ ನೆರವೇರಿಸಿದರು. ಸಮಾರೋಪ ಸಮಾರಂಭದಲ್ಲಿ ಉಧ್ಯಮಿ ಹಾಗೂ ಪ್ರಗತಿಪರ ಕೃಷಿಕ ಗಣೇಶ್ ಗೌಡ ಕಲಾಯಿ ವಿಜೇತರಿಗೆ ಬಹುಮಾನ ವಿತರಿಸಿದರು.

ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪ್ರವೀಣ ಬಳಗ ಬೈಪಾಡಿ ದ್ವಿತೀಯ ಸ್ಥಾನವನ್ನು ರಿತೇಶ ಕುಮಾರ್ ಪಟ್ರಮೆ ತಂಡ ತಮ್ಮದಾಗಿಸಿಕೊಂಡಿದ್ದು, ಪಂಚಾಯತ್ ಅಧ್ಯಕ್ಷ ಮನೋಜ್ ಕುಮಾರ್, ಎಸ್. ಮಹಾವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನಅರ್ಚಕರಾದ ಶಿವಾನಂದ ಮಯ್ಯ, ಎಸ್.ವಿ.ಟಿ ಅಧ್ಯಕ್ಷ ಹರ್ಷಿತ್ ಮಿತ್ತಡ್ಕ, ಹಾಗೂ ಕಾರ್ಯದರ್ಶಿ ಲೋಹಿತ್ ಸಂಕೇಶ ಉಪಸ್ಥಿತರಿದ್ದರು. ಪಂದ್ಯಾಟದ ನಿರೂಪಣೆಯನ್ನು ತಿಲಕ್ ರಾಜ್ ಅನಾರು ಹಾಗೂ ಉಮೇಶ್ ಅಲುಂಗೂರು ನೆರವೇರಿಸಿದರು.

Exit mobile version