Site icon Suddi Belthangady

ಇಂದಬೆಟ್ಟು:ಸುಧರ್ಮ ರಿಕ್ಷಾ ಮಾಲಕ ಮತ್ತು ಚಾಲಕರ ಸಂಘದಿಂದ ವಾಹನ ಪೂಜೆ

ಇಂದಬೆಟ್ಟು: ಸುಧರ್ಮ ರಿಕ್ಷಾ ಮಾಲಕ ಮತ್ತು ಚಾಲಕರ ಸಂಘದಿಂದ ರಿಕ್ಷಾ ತಂಗುದಾಣದಲ್ಲಿ ಶ್ರೀ ಅರ್ಧನಾರಿಶ್ವರ ದೇವಸ್ಥಾನದ ಅರ್ಚಕ ವೇದಮೂರ್ತಿ ಆನಂದ ಭಟ್ ಅವರ ಪೌರೋಹಿತದಲ್ಲಿ ಸರ್ವ ಧರ್ಮದವರ‌ ಆಟೋ ವಾಹನ ಹಾಗೂ ಇತರ ವಾಹನಗಳಿಗೆ ಪೂಜೆ ನೇರವೆರಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ಎನ್. ಲಕ್ಷ್ಮಣ ಗೌಡ, ಅರ್ಧನಾರೀಶ್ವರ ದೇವಸ್ಥಾನ ಮೊಕ್ತೇಸರ ಹಾಗೂ ಇಂದಬೆಟ್ಟು ಮೊಯ್ಯದ್ದಿನ್ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಮುತ್ತಲಿಬ್, ಚರ್ಚ್ ಉಪಾಧ್ಯಕ್ಷ ಇನ್ಸ್ಂಟ್ ಡಿ ಸೋಜಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಂತರ ವಿವಿದ ಆಟೋಟ ಸ್ಷರ್ದೆಗಳು ನಡೆಯುತ್ತಿದ್ದಂತೆ ವಿಶೇಷವಾಗಿ ಸೋಜಿ ಹಾಗೂ ದೊಸೆ ಹಬ್ಬವು ವಿಜೃಂಭನೆಯಿಂದ ನಡೆಯಿತು. ಸುಧರ್ಮ ರಿಕ್ಷಾ ಮಾಲಕ ಹಾಗೂ ಚಾಲಕ ಸಂಘದ ಅಧ್ಯಕ್ಷ ಹುಸೈನ್, ಕಾರ್ಯದರ್ಶಿ ರವಿ ಹಾಗೂ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು, ಸರ್ವಧರ್ಮೀಯರ ಸಹಕಾರದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಸತೀಶ್ ಮನ್ನಡ್ಕ ಹಾಗೂ ರವಿ ನೇತ್ರಾವತಿ ನಗರ ವಹಿಸಿದರು.

Exit mobile version